ಆಡಲು ಲಿಖಿತ ಒಪ್ಪಿಗೆ ನೀಡಲು ಆಟಗಾರರಿಗೆ ಬಿಎಐ ಸೂಚನೆ

Update: 2020-09-17 18:19 GMT

 ಹೊಸದಿಲ್ಲಿ: ಮುಂದಿನ ತಿಂಗಳು ಒಡೆನ್ಸ್‌ನಲ್ಲಿ ನಡೆಯುವ ಡೆನ್ಮಾರ್ಕ್ ಓಪನ್ ಸೂಪರ್ -750 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಷಟ್ಲರ್‌ಗಳು ತಮ್ಮದೇ ಜವಾಬ್ದಾರಿಯಲ್ಲಿ ತೆರಳಬೇಕು ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಸೂಚಿಸಿದೆ.

 ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ನಡೆಯುವ ಈವೆಂಟ್‌ನಲ್ಲಿ ತಮ್ಮ ಪ್ರಯಾಣ ಮತ್ತು ಭಾಗವಹಿಸುವಿಕೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಆಟಗಾರರು ತಮ್ಮ ಲಿಖಿತ ಒಪ್ಪಿಗೆಯನ್ನು ಫೆಡರೇಶನ್‌ಗೆ ನೀಡಬೇಕಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯೋಜಿಸುವವರು ಸೆಪ್ಟೆಂಬರ್ 17ರೊಳಗೆ ತಮ್ಮ ನಿಲುವನ್ನು ತಿಳಿಸುವಂತೆ ಇಮೇಲ್ ಮೂಲಕ ಬಿಎಐ ಸೂಚಿಸಿದೆ. ನಿಗದಿತ ಸಮಯದಲ್ಲಿ ಯಾವುದೇ ಮಾಹಿತಿ ನೀಡದೆ ಇದ್ದಲ್ಲಿ, ನೀವು ಡೆನ್ಮಾರ್ಕ್ ಓಪನ್ 2020ನಲ್ಲಿ ಭಾಗವಹಿಸಲು ಸಿದ್ಧರಿಲ್ಲ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದು ಬಿಎಐ ಪತ್ರದಲ್ಲಿ ತಿಳಿಸಿದೆ.

 ಭಾರತದಿಂದ ಭಾಗವಹಿಸುವವರಲ್ಲಿ ಪಿ.ವಿ ಸಿಂಧು, ಸೈನಾ ನೆಹ್ವಾಲ್, ಕೆ ಶ್ರೀಕಾಂತ್, ಲಕ್ಷ ಸೇನ್, ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಇದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News