ಸಂಸದರ ವೇತನ ಶೇ. 30 ಕಡಿತದ ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ

Update: 2020-09-18 15:34 GMT

ಹೊಸದಿಲ್ಲಿ, ಸೆ. 18: ಕೊರೋನ ಪಿಡುಗಿನಿಂದ ಉದ್ಭವಿಸಿದ ಅಗತ್ಯತೆಗಳನ್ನು ಪೂರೈಸಲು ಒಂದು ವರ್ಷ ಕಾಲ ಸಂಸದರ ವೇತನವನ್ನು ಶೇ. 30ರಷ್ಟು ಕಡಿತಗೊಳಿಸುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿತು.

 ಸಂಸತ್ ಸದಸ್ಯರ ವೇತನ, ಭತ್ಯೆ, ಹಾಗೂ ಪಿಂಚಣಿ (ತಿದ್ದುಪಡಿ)-2020 ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು. ಈ ಮಸೂದೆಗೆ ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆ ದೊರಕಿತ್ತು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಗುರುವಾರ ಮೇಲ್ಮನೆಯಲ್ಲಿ ಈ ಮಸೂದೆ ಮಂಡಿಸಿದರು.

ಕೊರೋನ ಪಿಡುಗಿನಿಂದ ಉದ್ಭವಿಸಿದ ಅಗತ್ಯತೆಗಳನ್ನು ಪೂರೈಸಲು ಒಂದು ವರ್ಷಗಳ ಕಾಲ ಸಚಿವರ ವೇತನ ಹಾಗೂ ಭತ್ಯೆಗಳನ್ನು ಶೇ. 30 ಕಡಿತಗೊಳಿಸುವ ಸಚಿವರ ವೇತನ ಹಾಗೂ ಭತ್ಯೆ (ತಿದ್ದುಪಡಿ)ಗಳ ಮಸೂದೆ-2020 ಮೇಲ್ಮನೆಯಲ್ಲಿ ಕೂಡ ಅಂಗೀಕಾರಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News