‘ಲಿಂಬೆ, ಕರಿಮೆಣಸು ಮಿಶ್ರಿತ ಮೀನಿನ ಖಾದ್ಯ: ವೃದ್ಧಾಪ್ಯ ನಿಧಾನಗೊಳ್ಳಲು ಕೇಂದ್ರ ಸಚಿವರ ಉಪಾಯ !

Update: 2020-09-18 17:38 GMT

ಹೊಸದಿಲ್ಲಿ, ಸೆ. 18: ‘ಲೆಮನ್ ಪೆಪ್ಪರ್ ಫಿಶ್’ (ಲಿಂಬೆ, ಕರಿಮೆಣಸು ಮಿಶ್ರಿತ ಮೀನಿನ ಖಾದ್ಯ)ನ ಪಾಕ ವಿಧಾನವನ್ನು ಶುಕ್ರವಾರ ಪೋಸ್ಟ್ ಮಾಡಿರುವ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಖಾತೆ ಸಚಿವ ಗಿರಿರಾಜ್ ಸಿಂಗ್, ಈ ಖಾದ್ಯ ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ ಹಾಗೂ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

  ‘‘ಲೆಮನ್ ಪೆಪ್ಪರ್ ಫಿಶ್’’ - ಶುಕ್ರವಾರ ರಾತ್ರಿಯ ಪರಿಪೂರ್ಣ ಭೋಜನ ! ಇನ್ನಷ್ಟು ಹೇಳಬೇಕೆಂದರೆ, ಇದು ವೃದ್ಧಾಪ್ಯವನ್ನು ವಿಳಂಬಿಸುತ್ತದೆ ಹಾಗೂ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಮೆದುಳು ಕಾರ್ಯ ನಿರ್ವಹಿಸುವುದಕ್ಕೆ ಸಂಬಂಧಿಸಿದ ಸ್ಮರಣೆಯನ್ನು ಸುಧಾರಿಸಲು ನೆರವು ನೀಡುತ್ತದೆ’’ ಎಂದು ಗಿರಿರಾಜ್ ಸಿಂಗ್ ಅವರು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ವೀಟ್‌ನೊಂದಿಗೆ ‘‘ಲೆಮನ್ ಪೆಪ್ಪರ್ ಫಿಶ್’’ ಪಾಕ ವಿಧಾನದ ವೀಡಿಯೊವನ್ನು ಅವರು ಲಗತ್ತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News