ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಕಾಮಗಾರಿ ಪರಿಶೀಲನೆ

Update: 2020-09-19 06:14 GMT

ಮಂಗಳೂರು, ಸೆ.19: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪಿಟ್‌ಲೈನ್ ಮತ್ತು ನಾಲ್ಕು ಹಾಗೂ ಐದನೆ ಪ್ಲಾಟ್‌ಫಾರ್ಮ್ ಕಾಮಗಾರಿ ಶೀಘ್ರ ಅನುಷ್ಠಾನಕ್ಕೆ ಸಂಬಂಧಿಸಿ ಪಾಲಕ್ಕಾಡ್ ರೈಲ್ವೆ ವಿಭಾಗದ ವಿಭಾಗೀಯ ಹೆಚ್ಚುವರಿ ಪ್ರಬಂಧಕ ಸಿ.ಟಿ. ಶಕೀರ್ ಹುಸೇನ್ ನೇತೃತ್ವದ ತಂಡ ಶುಕ್ರವಾರ ಮಂಗಳೂರಿಗೆ ಆಗಮಿಸಿದೆ.

ಕಾಮಗಾರಿಗಳ ಪರಿಶೀಲನೆ ನಡೆಸಿದ ತಂಡದಲ್ಲಿ ಹಿರಿಯ ವಿಭಾಗೀಯ ವಾಣಿಜ್ಯ ಪ್ರಬಂಧಕ ಜೆರಿನ್ ಜಿ. ಆನಂದ್, ಹಿರಿಯ ವಿಭಾಗೀಯ ನಿರ್ವಹಣಾ ಪ್ರಬಂಧಕ ಪಿ.ಎಲ್. ಅಶೋಕ್ ಕುಮಾರ್, ಹಿರಿಯ ವಿಭಾಗೀಯ ಇಂಜಿನಿಯರ್ ಎಚ್.ಅನಂತ್ ರಾಮನ್ ಸೇರಿದಂತೆ ಪಾಲಕ್ಕಾಡ್ ವಿಭಾಗದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನೇತ್ರಾವತಿ- ಮಂಗಳೂರು ಸೆಂಟ್ರಲ್ ರೈಲ್ವೆ ಹಳಿ ದ್ವಿಗುಣ ಹಾಗೂ ಹೊಸತಾದ ಫ್ಲಾಟ್‌ಫಾರ್ಮ್ ನಿರ್ಮಾಣದ ಅನಂತರ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಯಾರ್ಡ್ ಪುನರ್ ರೂಪಿಸುವುದು ಹಾಗೂ ಇತರ ಕಾಮಗಾರಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News