ಮೂಲರಪಟ್ಣ : ಆಯುಷ್ಮಾನ್, ಇತರ ಸೌಲಭ್ಯಗಳ ಕಾರ್ಡ್ ನೋಂದಣಿ ಶಿಬಿರ

Update: 2020-09-19 12:48 GMT

ಮೂಲರಪಟ್ಣ : ಜಿ.ಎಚ್.ಎಮ್ ಫೌಂಡೇಶನ್ ಸಹಯೋಗದೊಂದಿಗೆ ಮುಲರಪಟ್ಣ ಬಾವ ಹಾಜಿ ಮತ್ತು ಹವ್ವಾ ಟ್ರಸ್ಟ್  ಇದರ ಪ್ರಾಯೋಜಕತ್ವದೊಂದಿಗೆ 3 ದಿನಗಳ ಆಯುಷ್ಮಾನ್ ಕಾರ್ಡ್ ಹಾಗೂ ಇತರ ಸೌಲಭ್ಯಗಳ ಕಾರ್ಡ್ ನೊಂದಣಿ ಕಾರ್ಯಕ್ರಮವು ಮೂಲರಪಟ್ಣ ಮದ್ರಸ ಸಭಾಂಗಣದಲ್ಲಿ ಶನಿವಾರ ಚಾಲನೆ ಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಇಂತಿಯಾಝ್ ಅರ್ಶದಿ ಅವರ ದುಆದೊಂದಿಗೆ ನೆರವೇರಿತು.

ಜಿಎಚ್ಎಮ್ ಫೌಂಡೇಶನ್ ಇದರ ಟ್ರಸ್ಟಿ, ಕಾರ್ಯದರ್ಶಿ ಸಜೀವುದ್ದೀನ್ ಸ್ವಾಗತಿಸಿ, ಜಿಎಚ್ಎಮ್ ಫೌಂಡೇಶನ್ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ನೀಡುತ್ತಿರುವ ಕಾರ್ಯಗಳ ಬಗ್ಗೆ ಪ್ರಸ್ತಾಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಎಚ್ಎಮ್ ಫೌಂಡೇಶನ್ ಇದರ ಅಧ್ಯಕ್ಷರಾದ ಹಂಝ ಗುತ್ತು ವಹಿಸಿದ್ದರು. ಬಾವ ಹಾಜಿ ಮತ್ತು ಹವ್ವಾ ಟ್ರಸ್ಟ್  ಇದರ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಮುಲರಪಟ್ಣ, ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಎಮ್.ಬಿ. ಅಶ್ರಫ್, ಜಿ.ಎಚ್ಎಮ್ ಟ್ರಸ್ಟಿ ಎಂಎಸ್ ಶಾಲಿ, ಬಾವ ಹಾಜಿ ಮತ್ತು ಹವ್ವಾ ಟ್ರಸ್ಟ್ ನ ಟ್ರಸ್ಟಿ ಮುಹಮ್ಮದ್ ಸಾಜೀದ್, ಹಿರಿಯರಾದ ಮುಹಮ್ಮದ್ ಎಂ.ಎಸ್, ಹಾಜಬ್ಬ, ಮುಹಮ್ಮದ್ ಮುಸ್ಲಿಯಾರ್, ಜಿಎಚ್ಎಂ ಸದಸ್ಯರು ಉಪಸ್ಥಿತರಿದ್ದರು.

ಬಾವ ಹಾಜಿ ಮತ್ತು ಹವ್ವಾ ಟ್ರಸ್ಟ್ ನ ಟ್ರಸ್ಟಿ ಹಾಗೂ ವೆಲ್ನೆಸ್ ಹೆಲ್ಪೈನ್ ಇದರ ಕೊರ್ ಸದಸ್ಯರಾದ  ಝಾಕಿರ್ ಪರ್ವೀಝ್, ಶಿಬಿರದ ಪ್ರಯೋಜನ ಕುರಿತು ಮಾತನಾಡಿ, ವೆಲ್ನೆಸ್ ಹೆಲ್ಪೈನ್ ಇದರ ಸಾಮಾಜಿಕ ಕಾರ್ಯಗಳನ್ನು ವಿವರಿಸಿದರು.  ಮೌಲಾನ ಅಝಾದ್ ಮಾದರಿ ಶಾಲೆ ಇದರ ಫ್ರಾಂಶುಪಾಲರಾದ ಹಾಜಿ  ಮುಹಮ್ಮದ್ ಹನೀಫ್ ಕಾರ್ಯಕ್ರಮನ್ನು ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News