ಕುರುಬ ಸಮುದಾಯಕ್ಕೆ ಶೇ.9 ಮೀಸಲಾತಿ ನೀಡಲು ಆಗ್ರಹಿಸಿ ಮನವಿ

Update: 2020-09-19 15:15 GMT

ಉಡುಪಿ, ಸೆ.19: ಕುರುಬ ಸಮುದಾಯಕ್ಕೆ ಶೇ.9ರಷ್ಟು ಮೀಸಲಾತಿಯನ್ನು ಹೆಚ್ಚಿಸಿ ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಹಾಲುಮತ ಮಹಾಸಭಾದ ಸಮಿತಿಯಿಂದ ಶನಿವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯವುಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಬುಡಕಟ್ಟು ಜನಾಂಗವಾಗಿರುವ ಕುರುಬ ಸಮುದಾಯವು ಬ್ರಿಟಿಷರ ಕಾಲ ದಿಂದಲೂ ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಯಲ್ಲಿದೆ. ರಾಜ್ಯದಲ್ಲಿಯೂ ಜೇನು ಕುರುಬ, ಕಾಡು ಕುರುಬ, ಗೊಂಡ, ರಾಜಗೊಂಡ ಮತ್ತು ಕುರುಬ (ಕೊಡಗು ಜಿಲ್ಲೆ) ಪರಿಶಿಷ್ಟ ಪಂಗಡ ಪಟ್ಟಿಯಲ್ಲಿದೆ. ಈ ಸೌಲಭ್ಯ ಕೆಲವೇ ಜಿಲ್ಲೆ ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮಂತ ಎ.ಗೋಡಿ, ಜಿಲ್ಲಾಧ್ಯಕ್ಷ ಸಿದ್ದಪ್ಪ ಏ ಐಹೋಳೆ, ಉಪಾಧ್ಯಕ್ಷ ರಾದ ರಾಮಣ್ಣ ಆಡಗಲ್ಲ, ಗೋವಿಂದಪ್ಪ ಉತ್ತೂರ, ಪ್ರಧಾನ ಕಾರ್ಯದರ್ಶಿ ಈರಪ್ಪ ಉಗಲವಾಟ, ಕೋಶಾಧಿಕಾರಿ ಶಿವನಗೌಡ ಪಾಟೀಲ, ಕುಮಾರ ಚಿಮ್ಮನಕಟ್ಟಿ, ಪ್ರಕಾಶ ಸುಳ್ಳದ, ಬರಮಪ್ಪ ವಗ್ಗರ, ಹನುಮಂತ ಮಲ್ಲೆನ್ನವರ, ವಿಠ್ಠಲ ಗೌಡ್ರ, ಲಕ್ಷ್ಮಣ ಕೋಲ್ಕಾರ, ಚೋಡಪ್ಪ ಗಚ್ಛೇಣ್ಣವರ, ಪರಸಪ್ಪ ಮಾಗಿ, ಮೈಲಾರೇಪ್ಪ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News