ಆದಿಉಡುಪಿ ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಮರ: ಬೈಕಿಗೆ ಹಾನಿ, ಸಂಚಾರದಲ್ಲಿ ವ್ಯತ್ಯು

Update: 2020-09-19 15:23 GMT

ಉಡುಪಿ, ಸೆ.19: ಭಾರೀ ಗಾಳಿಮಳೆಯಿಂದ ಆದಿಉಡುಪಿ ಪ್ರೌಢಶಾಲೆ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ಸೆ.19ರಂದು ಸಂಜೆ 6.45ರ ಸುಮಾರಿಗೆ ನಡೆದಿದೆ.

ಮರ ಬುಡ ಸಮೇತ ಬಿಳುವಾಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕಿನ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಬೈಕಿಗೆ ಹಾನಿಯಾಗಿದ್ದು, ಸವಾರನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಒಂದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಸುಮಾರು ತಾಸು ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತ್ತೆನ್ನಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕದಳ, ಅರಣ್ಯ ಇಲಾಖೆ ಹಾಗೂ ಪೊಲೀಸರು ಆಗಮಿಸಿ ಮರ ತೆರವು ಕಾರ್ಯ ನಡೆಸಿದರು. ಕ್ರೇನ್ ಬಳಸಿ ಸುಮಾರು ಅರ್ಧಗಂಟೆ ಯಲ್ಲಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಅಲ್ಲಿಯವರೆಗೆ ಮಲ್ಪೆ- ಕರಾವಳಿ ಬೈಪಾಸ್ ರಸೆ ಸಂಚಾರವನ್ನು ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಡುಪಿ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗಳು ಸಂಚಾರದಟ್ಟಣೆಯನ್ನು ನಿಯಂತ್ರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News