ಕೋಡಿ: ಸಾಮೂಹಿಕ ಉಚಿತ ಸುನ್ನತ್ ಕಾರ್ಯಕ್ರಮ

Update: 2020-09-19 15:31 GMT

ಕುಂದಾಪುರ, ಸೆ.19: ಕುಂದಾಪುರ ಕೋಡಿ ಯಂಗ್ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಆಶ್ರಯದಲ್ಲಿ ಸಾಮೂಹಿಕ ಉಚಿತ ಸುನ್ನತ್(ಮುಂಜಿ) ಕಾರ್ಯಕ್ರಮ ಇತ್ತೀಚೆಗೆ ಕೋಡಿಯ ಎನ್‌ಎಂಎ ಸೌಹಾರ್ದ ಭವನದಲ್ಲಿ ಜರಗಿತು.

ಜಿಲ್ಲೆಯ ಕಾಪು, ಕಟಪಾಡಿ, ಬ್ರಹ್ಮಾವರ, ಬೈಂದೂರು, ನಾವುಂದ, ಹೆಮ್ಮಾಡಿ, ಮಾವಿನಕಟ್ಟೆ, ಗುಲ್ವಾಡಿ, ಕೋಟೇಶ್ವರ, ಮೂಡುಗೋಪಾಡಿ, ಹಂಗ್ಳೂರು ಹಾಗೂ ಕೋಡಿ ಪರಿಸರದ ಒಟ್ಟು 52 ಮಕ್ಕಳಿಗೆ ಉಚಿತ ಸುನ್ನತ್ ಮಾಡ ಲಾಯಿತು. ಎಲ್ಲಾ ಮಕ್ಕಳಿಗೂ ಔಷಧಿ ಹಾಗೂ ಬಟ್ಟೆ ಗಳನ್ನು ಉಚಿತವಾಗಿ ನೀಡಲಾಯಿತು. ಕಾರ್ಕಳ ಸಿಟಿ ಆಸ್ಪತ್ರೆಯ ವೈದ್ಯ ಡಾ.ರಹಮತುಲ್ಲಾ ಹಾಗೂ ತಂಡ ಸುನ್ನತ್ ಕಾರ್ಯಕ್ರಮ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಎನ್‌ಎಂಎ ಕೇಂದ್ರ ಸಮಿತಿ ಅಧ್ಯಕ್ಷ ಅಬೂಬಕರ್ ಮಹಮ್ಮದ್ ಅಲಿ, ಉಪಾಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್, ತಾಲೂಕು ಸಮಿತಿಯ ಅಧ್ಯಕ್ಷ ಶೇಖ್ ಅಬೂಮಹಮ್ಮದ್, ಉಪಾಧ್ಯಕ್ಷ ಶಾಬಾನ್ ಎ.ಎಚ್., ಗೌರವಾಧ್ಯಕ್ಷ ಸರ್ದಾರ್ ಗುಲ್ವಾಡಿ, ರಫೀಕ್ ಗಂಗೊಳ್ಳಿ ಭಾಗವಹಿಸಿ ದ್ದರು.

ಸಂಸ್ಥೆಯ ಅಧ್ಯಕ್ಷ ಅಶ್ರಫ್ ಬ್ಯಾರಿ, ಉಪಾಧ್ಯಕ್ಷ ಮಹಮ್ಮದ್ ಅಲಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಕೆ.ಎಸ್., ಕೋಶಾಧಿಕಾರಿ ಕೆ. ಮಹಮ್ಮದ್, ಹುಸೈನಾರ್ ಕೋಡಿ, ರಶೀದ್ ಕೋಡಿ, ಅಹಮದ್ ಯೂಸುಫ್, ಹಸೈನಾರ್ ಗುಲ್ವಾಡಿ, ರಝಾಕ್ ಮೆಡ್ರಾಸ್ ಉಪಸ್ಥಿತರಿದ್ದರು. ಮನ್ಸೂರ್ ಹೆಮ್ಮಾಡಿ ದುವಾ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News