ಅಪಾಯದ ಸ್ಥಿತಿಯಲ್ಲಿರುವ ಕಟ್ಟಡ ತೆರವುಗೊಳಿಸಲು ಆಗ್ರಹ

Update: 2020-09-19 15:33 GMT

ಉಡುಪಿ, ಸೆ.19: ನಗರದ ಚಿತ್ತರಂಜನ್ ಸರ್ಕಲ್ ಬಳಿಯ ರಾಯಲ್ ಮಹಲ್ ವಾಣಿಜ್ಯ ಸಂಕೀರ್ಣದ ಒಂದು ಪಾರ್ಶ್ವವು ಉರುಳಿ ಬಿದ್ದಿದ್ದು, ಅಪಾಯದ ಸ್ಥಿತಿಯಲ್ಲಿರುವ ಈ ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆಗಳು ನಡೆಯದಿರುವುದರಿಂದ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಆದುದರಿಂದ ಆಡಳಿತ ವ್ಯವಸ್ಥೆಗಳು ತಕ್ಷಣ ಈ ಕಟ್ಟಡವನ್ನು ತೆರವಗೊಳಿಸಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

ಅಳಿದು ಉಳಿದಿರುವ ಕಟ್ಟಡವು ಧಾರಾಕಾರವಾಗಿ ಮಳೆ ಸುರಿಯುತ್ತಿರುವುದ ರಿಂದ, ಉರುಳಿ ಬೀಳುವ ಸಾಧ್ಯತೆ ಇದೆ. ಚಿತ್ತರಂಜನ್ ಸರ್ಕಲ್ ಪ್ರದೇಶವು ನಗರದ ಜನ ಸಂಪರ್ಕ ಇರುವ ಪ್ರಮುಖ ಪ್ರದೇಶವಾಗಿದೆ. ಇಲ್ಲಿ ಹೆರಿಗೆ ಆಸ್ಪತ್ರೆ, ರಾಷ್ಟ್ರಿಕೃತ ಬ್ಯಾಂಕುಗಳು, ವಾಣಿಜ್ಯ ಕೇಂದ್ರಗಳು, ಚಿನ್ನಾಭರಣ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ.

ಹಾಗಾಗಿ ಈ ಪ್ರದೇಶದಲ್ಲಿ ಸಾರ್ವಜನಿಕರ, ವಾಹನಗಳ ಸಂಚಾರವು ಅಧಿಕ ವಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ಅನಾಹುತ ಗಳು ಸಂಭವಿ ಸುವ ಮೊದಲೇ ಜಿಲ್ಲಾಡಳಿತ, ನಗರಾಡಳಿತ ತಕ್ಷಣದಲ್ಲಿ ಬಿರುಕು ಬಿದ್ದಿರುವ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News