ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ: ನಾಲ್ವರ ಬಂಧನ

Update: 2020-09-19 15:38 GMT

ಗಂಗೊಳ್ಳಿ, ಸೆ.19: ಇನ್ಸುಲೇಟರ್ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಗಂಗೊಳ್ಳಿ ಪೊಲೀಸರು ಸೆ.18ರಂದು ರಾತ್ರಿ 9:30ರ ಸುಮಾರಿಗೆ ಮರವಂತೆಯ ಮಸೀದಿ ಸಮೀಪ ಬಂಧಿಸಿದ್ದಾರೆ.

ಮಂಗಳೂರು ಹರೇಕಳದ ನಿವಾಸಿಗಳಾದ ಮಹಮ್ಮದ್ ಸಾಕೀರ್(24), ಮಹಮ್ಮದ್ ಜಾಫರ್(32), ಬೈಂದೂರು ಕಿರಿಮಂಜೇಶ್ವರದ ಅಲಾಝ್ (20) ಹಾಗೂ ಹೊನ್ನಾವರ ತಾಲೂಕಿನ ಮಹಮ್ಮದ್ ಇಸೂಫ್ ಸಾಬ್(45) ಬಂಧಿತ ಆರೋಪಿಗಳು.

ಇನ್ಸುಲೇಟರ್ ವಾಹನದಲ್ಲಿ ಭಟ್ಕಳದಿಂದ ಕುಂದಾಪುರ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಗಂಗೊಳ್ಳಿ ಎಸ್ಸೈ ಭೀಮಾಶಂಕರ್ ಎಸ್. ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತರಿಂದ 45ಸಾವಿರ ರೂ. ಮೌಲ್ಯದ 20.63ಗ್ರಾಂ ತೂಕದ ಗಾಂಜಾ ಮತ್ತು 5 ಮೊಬೈಲ್‌ಗಳು ಹಾಗೂ 14 ಲಕ್ಷ ರೂ. ವೌಲ್ಯದ ಇನ್ಸುಲೇಟರ್ ವಾಹನವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News