ಮೊಂಟೆಪದವು ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Update: 2020-09-19 16:11 GMT

ಉಳ್ಳಾಲ: ಹ್ಯುಮಾನಿಟಿ ಫೌಂಡೇಶನ್ ಮಂಗಳೂರು ಇದರ ಆಶ್ರಯದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸುವ ಕಾರ್ಯಕ್ರಮ ಮೊಂಟೆಪದವು ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಯು.ಟಿ ಖಾದರ್ ಮಾತನಾಡಿ  " ಮಕ್ಕಳ ಪರಿಶ್ರಮ ಮತ್ತು ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತದೆ  ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಂಟೆಪದವು ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ವನಿತ ದೇವಾಡಿಗ ವಹಿಸಿದ್ದರು. ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ,  ಉಪ ಪ್ರಾಂಶುಪಾಲ ಸಂತೋಷ್ ಟಿ.ಎನ್, ಮುರಳೀಧರ ಶೆಟ್ಟಿ‌ ಮೋರ್ಲ, ಎನ್ ಎಸ್ ಕರೀಂ,   ಹನೀಫ್   ಚಂದಹಿತ್ಲು  ಹ್ಯೂಮಾನಿಟಿ ಫೌಂಡೇಷನ್ ಉಪಾಧ್ಯಕ್ಷರಾದ ಯೂಸುಫ್ ಉಚ್ಚಿಲ, ಜಾಫರ್ ಉಳ್ಳಾಲ, ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ,  ಕಲಂದರ್ ನಾಟಕಲ್, ಸಂಶೀರ್ ಕುತ್ತಾರ್, ಆಸಿಫ್ ಕುತ್ತಾರ್, ಇಕ್ಬಾಲ್ ದೇರಳಕಟ್ಟೆ, ಝಮೀರ್ ತೊಕ್ಕೊಟ್ಟು, ಕಲೀಲ್‌ ಪನೀರ್, 
ಸೈಫುಲ್ಲಾ ಸೋಮೇಶ್ವರ, ಅಝೀಝ್ ಮದ್ಪಾಡಿ ಉಪಸ್ಥಿತರಿದ್ದರು.

ಹ್ಯೂಮಾನಿಟಿ ಫೌಂಡೇಷನ್  ಅಧ್ಯಕ್ಷ ನಾಸಿರ್ ಸಾಮನಿಗೆ ಸಂಸ್ಥೆಯ ಪರಿಚಯ ಮಾಡಿ, ಸ್ವಾಗತಿಸಿದರು. ರಹ್ಮಾನ್ ಚಂದಹಿತ್ಲು ವಂದಿಸಿದರು, ಪ್ರಧಾನ ಕಾರ್ಯದರ್ಶಿ  ಹಮೀದ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News