ಬಿಲ್ ಪಾವತಿಸದಿದ್ದರೆ ಸೆ.21ರಿಂದ ವಿದ್ಯುತ್ ಸಂಪರ್ಕ ಕಡಿತ : ಮೆಸ್ಕಾಂ ಸೂಚನೆ

Update: 2020-09-19 16:20 GMT

ಮಂಗಳೂರು, ಸೆ.19: ಕೋವಿಡ್-19 ಸಂಕಷ್ಟದಿಂದಾಗಿ ವಿದ್ಯುತ್ ಬಿಲ್ ವಸೂಲಾತಿಯು ಕುಂಠಿತವಾಗಿದೆ. ಗ್ರಾಹಕರಿಂದ ದಿನನಿತ್ಯ ವಸೂಲಾಗುವ ಕಂದಾಯ ಮೊತ್ತದಲ್ಲಿ ಕಂಪೆನಿಯ ದೈನಂದಿನ ಖರ್ಚು ವೆಚ್ಚಗಳು ಅದರಲ್ಲೂ ವಿದ್ಯುತ್ ಖರೀದಿ ವೆಚ್ಚವನ್ನು ಭರಿಸಲಾಗುತ್ತಿದೆ. ಗ್ರಾಹಕರಿಂದ ವಿದ್ಯುತ್ ಬಿಲ್ ಪಾವತಿಯು ವಿಳಂಬವಾದಲ್ಲಿ ವಿದ್ಯುತ್ ಖರೀದಿ ಬಿಲ್ಲನ್ನು ಪಾವತಿಸಲು ಅಸಾಧ್ಯವಾಗಲಿದೆ. ಹಾಗಾಗಿ ಗ್ರಾಹಕರು ತಕ್ಷಣ ವಿದ್ಯುತ್ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ಸೆ.21ರಿಂದ ವಿದ್ಯುತ್ ಬಿಲ್ ಬಾಕಿ ಇರುವ ಸ್ಥಾವರಗಳ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News