ಮಂಗಳೂರಲ್ಲಿ ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡಮಿ: ಸಂಸದ ನಳಿನ್‌ ಕುಮಾರ್

Update: 2020-09-19 17:24 GMT

ಮಂಗಳೂರು, ಸೆ.19: ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡಮಿಯು ಕಡಲನಗರಿ ಮಂಗಳೂರಿನಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್ ತಿಳಿಸಿದ್ದಾರೆ.

ನಗರದ ಹೊರವಲಯದ ಬಜ್ಪೆಯ ಕೆಂಜಾರು ಸಮೀಪ 158 ಎಕರೆ ಪ್ರದೇಶದಲ್ಲಿ ಈ ಕೋಸ್ಟ್ ಗಾರ್ಡ್ ಅಕಾಡಮಿ ಸ್ಥಾಪಿಸಲು ಭೂಮಿಯನ್ನು ಕೆಐಎಡಿಬಿಯಿಂದ ಪಡೆದುಕೊಂಡಿದೆ. ಈ ಅಕಾಡಮಿಯು ದೇಶದ ಕಡಲ ರಕ್ಷಣೆಗಾಗಿ ವೃತ್ತಿಪರ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿಯಲ್ಲಿ ಮೈಲಿಗಲ್ಲು ಆಗಲಿದೆ ಎಂದು ಸಂಸದರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News