ಮಳೆಗಾಳಿಗೆ ಸಿಲುಕಿಕೊಂಡಿರುವ ಮೀನುಗಾರಿಕಾ ದೋಣಿ; ಮೀನುಗಾರರ ರಕ್ಷಣೆ

Update: 2020-09-20 17:32 GMT

ಭಟ್ಕಳ : ಮಳೆಗಾಳಿಗೆ ಸಿಲುಕಿ ಅಪಾಯದಲ್ಲಿರುವ ಮೀನುಗಾರರು ರಕ್ಷಣೆಗಾಗಿ ತಮ್ಮ ಸಂಬಂಧಿಕರಿಗೆ ಮೊರೆ ಹೋಗಿದ್ದು ಅಪಾಯದಲ್ಲಿದ್ದ ನಾಲ್ಕು ಮಂದಿ ಮೀನುಗಾರರನ್ನು ಅಬೂಬಕರ್ ಎನ್ನುವವರ ದೋಣಿಯ ಮೂಲಕ ದಡಕ್ಕೆ ಸೇರಿಸಿದ ಘಟನೆ ರವಿವಾರ ನಡೆದಿದೆ.

ಅಪಾಯದಿಂದ ಪಾರಾಗಿರುವ ಮೀನುಗಾರರನ್ನು ಸಚಿನ್ ಮೊಗೇರ, ನಾರಾಯಣ ಮೊಗೇರ, ಜ್ಞಾನೇಶ ಮೊಗೇರ ಹಾಗೂ ಹರೀಶ್ ಮೊಗೇರ ಎಂದು ಗುರುತಿಸಲಾಗಿದೆ.

ಅಬೂಬಕರ್ ಎನ್ನುವವರ ದೋಣಿಯ ಮೂಲಕ ವಿನೋದ ಮೊಗೇರ ಮುಂಡಳ್ಳಿ, ರೋಹಿದಾಸ ಮೊಗೇರ ಮುರುಡೇಶ್ವರ, ಕೃಷ್ಣ ಮೊಗೇರ ಬೆಳ್ನಿ ಹಾಗೂ ಮಂಜುನಾಥ ಮೊಗೇರ ಎನ್ನುವವರು ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

ರವಿವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಮಾದೇವ ಮೊಗೇರ ಅಳ್ವೆಕೋಡಿ ಮಾಲೀಕತ್ವದ ಗಿಲ್ನೆಟ್ ದೋಣಿಯಲ್ಲಿ ನಾಲ್ವರು ಮೀನುಗಾರರು ಸೇರಿಕೊಂಡು ಅಳ್ವೆಕೋಡಿ ಬಂದರ್ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಮುಂಜಾನೆಯಿಂದ ಶುರುದ ಭಾರಿ ಮಳೆಗೆ ಸಮುದ್ರದಲ್ಲಿ ಅಲೆಗಳು ಹೆಚ್ಚಾಗಿ ದೋಣಿ ತೀರಕ್ಕೆ ಬರಲಾಗದೆ ಸಮುದ್ರದ ನಡುವೆ ಇರುವ ಕಾಗೆ ಗುಡ್ಡದ ಹತ್ತಿರ ಸಿಲುಕಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News