ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ : ಕತರ್ ರಾಷ್ಟ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2020-09-20 17:45 GMT

ಮಂಗಳೂರು : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಈಗಾಗಲೇ ಸೌದಿ ಅರೇಬಿಯಾ, ಯುಎಈ, ಬಹ್‍ರೈನ್ ,ಕತರ್ ಹಾಗೂ ಒಮಾನ್ ಮುಂತಾದ ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದು ಇದರ ಕತರ್ ನ್ಯಾಷನಲ್ ಸಮಿತಿಯನ್ನು ಇತ್ತೀಚೆಗೆ ಪುನರಚಿಸಲಾಯಿತು. 

ಡಿಕೆಯಸ್ಸಿ ಕೇಂದ್ರ ಸಮಿತಿ ಅಧ್ಯಕ್ಷ ಅಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿದ್ದರು. ಮರ್ಕಝ್ ತಅ್ ಲೀಮಿಲ್ ಇಹ್ಸಾನ್ ಮೂಳೂರು ಜನರಲ್ ಮ್ಯಾನೇಜರ್ ಮೌಲಾನಾ ಯು ಕೆ ಮುಸ್ತಫಾ ಸಅದಿ ಉದ್ಘಾಟಿಸಿ, ಅಲ್ ಇಹ್ಸಾನ್ ವುಮೆನ್ಸ್ ಶರೀಅತ್ ಕಾಲೇಜು ಪ್ರಾಂಶುಪಾಲರಾದ ಮುಹಮ್ಮದ್ ಅಲ್ ಕಾಸಿಮಿ ಮುಖ್ಯ ಪ್ರಭಾಷಣ ಮಾಡಿದರು.

ಸಭೆಯಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರಾದ ಹಾಜಿ ಹಾತಿಂ ಕಂಚಿ , ಮಾಜಿ ಕಾರ್ಯಾಧ್ಯಕ್ಷರಾದ ಅಬ್ದುಲ್ ಹಮೀದ್ ಅರೆಮಿಕ್ಸ್ ಮುಂತಾದವರು ಹಿತವಚನ ನೀಡಿದರು.

ನಂತರ ನೂತನ ಕತರ್ ನ್ಯಾಷನಲ್ ಕಮಿಟಿಯನ್ನು ರಚಿಸಲಾಯಿತು. ಸುಲೈಮಾನ್ ಮುಂಡ್ಕೂರು ಅಧ್ಯಕ್ಷರು , ಇಸ್‍ಹಾಕ್ ನಿಝಾಮಿ ಪ್ರಧಾನ ಕಾರ್ಯದರ್ಶಿ , ಅಯ್ಯೂಬ್ ಹೊನ್ನಾವರ ಕೋಶಾಧಿಕಾರಿ,  ಅಸ್‍ಗರ್ ಮೂಳೂರು, ಶಂಸುದ್ದೀನ್ ಕಾಟಿಪಳ್ಳ ಉಪಾಧ್ಯಕ್ಷರುಗಳು , ಸಯ್ಯಿದ್ ಅಬ್ದುಲ್ ರಝ್ಝಾಕ್ ಮುಂಡ್ಕೂರು ಹಾಗೂ ನಿಹಾಲ್ ಇಬ್ರಾಹಿಂ ಕಾಪು ಜೊತೆ ಕಾರ್ಯದರ್ಶಿಗಳು, ಪಿ ಕೆ ಮುಹಮ್ಮದ್ ಪೂಂಜಾಲ್ ಕಟ್ಟೆ , ಅನ್ವರ್ ಹಳೆಯಂಗಡಿ, ಅನ್ಸಾರ್ ಮಟ್‍ಪಾಡಿ ಸಂಚಾಲಕರು, ಜಮಾಲುದ್ದೀನ್ ಪಕ್ಷಿಕ್ಕೆರೆ , ಹೈದರ್ ಅಲಿ ಹಸ್ಸನ್ ಕುಂಜತ್ತಬೈಲ್, ಅಬ್ದುಲ್ ಹಮೀದ್ ತೋಕೆ, ನಝೀರ್ ವಳಚ್ಚಿಲ್, ಅಬ್ದುಲ್ಲಾ ಮುಹಿಯದ್ದಿ ಉಚ್ಚಿಲ, ಮುಹಮ್ಮದ್ ಅಶ್ರಫ್ ವಳಚ್ಚಿಳ್, ಪೈಸಲ್ ಬರ್‍ವ, ಅಬ್ದುಲ್ ರಹಿಮಾನ್ ಶಿರ್ವ, ಸೂಪಿ ಇಬ್ರಾಹಿಂ ನೇಜಾರ್, ಯಹ್ಯಾ ಕೊಡಗೈ, ಮುಹಮ್ಮದ್ ಶರೀಫ್ ಮಾಡೂರು, ಅಬ್ದುಲ್ ರಹಿಮಾನ್ ಉಪ್ಪಿನಂಗಡಿ, ಇಮ್ತಿಯಾಝ್ ಕಾರ್ನಾಡ್, ತಬ್‍ಶೀರ್ ಮನಹರ್, ಇಮ್ರಾನ್ ಬಂಟ್ವಾಳ, ಪಾರೂಕ್ ಬೆಳಪು ಮತ್ತು ಹಬೀಬ್ ಹಿಮಮಿ ಕಾರ್ಯಕಾರಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು.

ಇಸ್‍ಹಾಕ್ ನಿಝಾಮಿ ಸ್ವಾಗತಿಸಿ, ದಾವೂದು ಕಜೆಮಾರ್ ಹಾಗೂ ಇಸ್ಮಾಯಿಲ್ ಮುಸ್ಲಿಯಾರ್ ದೊಡ್ಡಣಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News