ಸೂಪರ್ ಓವರ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬನ್ನು ಮಣಿಸಿದ ದಿಲ್ಲಿ ಕ್ಯಾಪಿಟಲ್ಸ್

Update: 2020-09-20 18:25 GMT

ಹೊಸದಿಲ್ಲಿ: ಐಪಿಎಲ್ ನ 2ನೆ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬನ್ನು ಸೂಪರ್ ಓವರ್ ನಲ್ಲಿ ದಿಲ್ಲಿ ಕ್ಯಾಪಿಟಲ್ಸ್ ತಂಡವು ಮಣಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ದಿಲ್ಲಿ ಕ್ಯಾಪಿಟಲ್ಸ್ ಸ್ಟೋನಿಸ್ ಅರ್ಧಶತಕದ ನೆರವಿನಿಂದ 157 ರನ್ ಗಳಿಸಿತ್ತು. ಗುರಿಯನ್ನು ಬೆನ್ನತ್ತಿದ ಪಂಜಾಬ್ ಕೂಡ 157 ರನ್ ಗಳಿಸಿತು. ಈ ಸಂದರ್ಭ ಸೂಪರ್ ಓವರ್ ನಡೆದಿದ್ದು, ಕಿಂಗ್ಸ್ ಇಲೆವನ್ 2 ರನ್ ಗಳಿಸಿ ಆಲೌಟಾಯಿತು. ದಿಲ್ಲಿ ತಂಡ ಈ ಗುರಿಯನ್ನು ನಿರಾಯಾಸವಾಗಿ ತಲುಪಿತು.

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಮಯಾಂಕ್ ಅಗರ್ವಾಲ್ 60 ಬಾಲ್ ಗಳಲ್ಲಿ 89 ರನ್ ಗಳಿಸಿದರು. ಮುಹಮ್ಮದ್ ಶಮಿ 3 ವಿಕೆಟ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News