×
Ad

ಎನ್‌ಎಲ್‌ಎಸ್‌ಐಯು ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಿದ ಸುಪ್ರಿಂಕೋರ್ಟ್

Update: 2020-09-21 14:57 IST

 ಹೊಸದಿಲ್ಲಿ, ಸೆ.21 :ಐದು ವರ್ಷದ ಸಮಗ್ರ ಬಿಎ ಎಲ್‌ಎಲ್‌ಬಿ (ಗೌರವ) ಕಾರ್ಯಕ್ರಮದ ಪ್ರವೇಶಕ್ಕಾಗಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (ಎನ್‌ಎಲ್‌ಎಸ್‌ಐ)ಯು ಸೆಪ್ಟೆಂಬರ್ 12ರಂದು ನಡೆಸಿದ ರಾಷ್ಟ್ರೀಯ ಕಾನೂನು ಆಪ್ಟಿಟ್ಯೂಡ್ ಟೆಸ್ಟ್‌ಗೆ (ಎನ್‌ಎಲ್‌ಎಟಿ)ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ಸುಪ್ರಿಂಕೋರ್ಟ್ ಇಂದು ರದ್ದುಗೊಳಿಸಿದೆ.

ಎನ್‌ಎಲ್‌ಎಟಿ-2020 ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ಎಲ್ಲಾ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್‌ಎಲ್‌ಯು) ಪ್ರವೇಶ ಪರೀಕ್ಷೆಗಳನ್ನು ಸಿಎಲ್‌ಎಟಿ - 2020 ಪ್ರಕಾರ ಸೆಪ್ಟೆಂಬರ್ 28ರಂದು ನಡೆಸಬೇಕೆಂದು ನಿರ್ದೇಶಿಸಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಮಾಜಿ ಎನ್‌ಎಲ್‌ಸ್‌ಐಯು ಉಪಕುಲಪತಿ ಪ್ರೊಫೆಸರ್ ಆರ್. ವೆಂಕಟ ರಾವ್ ಮತ್ತು ಆಕಾಂಕ್ಷಿಯ ಪೋಷಕರು ಎನ್‌ಎಲ್‌ಎಟಿ -2020 ನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿತ್ತು.

 ಎಲ್ಲಾ ಎನ್‌ಎಲ್‌ಯುಎಸ್ ಅಕ್ಟೋಬರ್ ಮಧ್ಯಭಾಗದಲ್ಲಿ ಶೈಕ್ಷಣಿಕ ವರ್ಷವನ್ನು ಆರಂಭಿಸಬೇಕೆಂದು ಜಸ್ಟಿಸ್ ಆರ್‌ಎಸ್ ರೆಡ್ಡಿ ಹಾಗೂ ಎಮ್‌ಆರ್ ಷಾ ಅವರಿದ್ದ ನ್ಯಾಯಪೀಠ ತಿಳಿಸಿದೆ.

 ಸಾಮಾನ್ಯ ಕಾನೂನು ಪರೀಕ್ಷೆ ಭಾರತದ 22 ಎನ್‌ಎಲ್‌ಯುಗಳಿಗೆ ಪ್ರವೇಶಕ್ಕಾಗಿ ಕೇಂದ್ರೀಕೃತ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಅವುಗಳಲ್ಲಿ ಒಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News