ಆನ್‌ಲೈನ್ ತರಗತಿಗಳು ಭವಿಷ್ಯದ ಶಿಕ್ಷಣದ ಅವಿಭಾಜ್ಯ ಅಂಗ : ಡಾ.ನಿಕೇತನ

Update: 2020-09-22 14:33 GMT

ಉಡುಪಿ, ಸೆ. 22: ಕೋವಿಡ್-19 ಹಲವು ಕಷ್ಟಗಳ ನಡುವೆ ಶಿಕ್ಷಕರಿಗೆ ಆನ್‌ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಕಲೆಯನ್ನು ಕಲಿಸಿದೆ. ಮುಂದಿನ ದಿನಗಳಲ್ಲಿ ಇದು ಶಿಕ್ಷಣದ ಅವಿಭಾಜ್ಯ ಅಂಗವಾಗಲಿದ್ದು, ನಮ್ಮ ಹೆಚ್ಚಿನ ಶಿಕ್ಷಕರಿಗೆ ಈ ಕುರಿತು ತರಬೇತಿಯ ಅನಿವಾರ್ಯತೆ ಇದೆ ಎಂದು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಹೇಳಿದ್ದಾರೆ.

ಹಿರಿಯಡಕ ಸರಕಾರಿ ಕಾಲೇಜಿನ ಪ್ರಾಧ್ಯಾಪಕರಿಗೆ ಐಕ್ಯುಎಸಿ ವತಿುಂದ ಹಮ್ಮಿಕೊಳ್ಳಲಾದ ಆನ್‌ಲೈನ್ ತರಗತಿಗಳ ಸಮರ್ಥ ನಿರ್ವಹಣಾ ಕೌಶಲ್ಯದ ಕುರಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮಣಿಪಾಲ ಎಂಐಟಿಯ ಸಹಾಯಕ ಪ್ರಾಧ್ಯಾಪಕಿ ಮ್ಯೂಸಿಕಾ ಸುಪ್ರಿಯಾ ಮಾತನಾಡಿ, ಆನ್‌ಲೈನ್ ತರಗತಿಗಳು ನೇರ ತರಗತಿಗಳಿಗೆ ಬದಲಿ ವ್ಯವಸ್ಥೆ ಯಾಗಲು ಸಾಧ್ಯವಿಲ್ಲ. ಆದರೆ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಎಂದು ಅಭಿಪ್ರಾಯಪಟ್ಟು, ಗೂಗಲ್ ಕ್ಲಾಸ್ರೂಮ್ ಹಾಗೂ ಇತರ ಆ್ಯಪ್ ಬಳಕೆಯ ಬಗ್ಗೆ ತರಬೇತಿ ನೀಡಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಸುಜಯಾ ಕೆ. ಎಸ್. ಶುಭ ಹಾರೈಸಿದರು. ಐಕ್ಯುಎಸಿ ಸಂಚಾಲಕ ಪ್ರವೀಣ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರೆ, ಸಹಸಂಚಾಲಕ ಡಾ. ಆನಂದ್ ಎಂ.ಬಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News