ಬಂಟ್ವಾಳ: ಜನಪರ ಮರಳು ನೀತಿಗೆ ಆಗ್ರಹಿಸಿ ಮನವಿ

Update: 2020-09-22 17:01 GMT

ಬಂಟ್ವಾಳ : ಮರಳು ದರ ಕಡಿಮೆ ಮಾಡಿ ಜನರಿಗೆ ಕೈಗೆಟಕುವ ದರದಲ್ಲಿ ಮರಳುಸಿಗುವಂತೆ ಜನಪರಮರಳು ನೀತಿ ರೂಪಿಸುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯಸಮಿತಿ ವತಿಯಿಂದ ಸೋಮವಾರ ಬಂಟ್ವಾಳ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಅವರು ಬಡವರು ಮನೆ ಅಥವಾ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಮರಳು ಅಡ್ಡಿಯಾಗಿದೆ. ಸರಿಯಾದ ಮರಳು ನೀತಿಯಿಲ್ಲದೆ ಜನಸಾಮಾನ್ಯರು ಸಂಕಷ್ಟಪಡುವಂತಾಗಿದೆ ಎಂದರು.

ಸಮಿತಿ ಅಧ್ಯಕ್ಷ ಬಿ.ಎಂ. ಪ್ರಭಾಕರ ದೈವಗುಡ್ಡೆ, ಕಾರ್ಯದರ್ಶಿ ಬಿ.ಶೇಖರ್, ಪದಾಧಿಕಾರಿಗಳಾದ ಹಾರೂನ್ ರಶೀದ್,ಲೋಲಾಕ್ಷ ಶೆಟ್ಟಿ,ಪ್ರಕಾಶ್ ಶೆಟ್ಟಿ ತುಂಬೆ ಶ್ರೀ ಶೈಲ, ಶರೀಫ್ ಮದ್ದ, ಇಸ್ಮಾಲಿ ಅರಬಿ, ಸಮ್ಮದ್ ಕೈಕಂಬ, ಮಹಮ್ಮದ್ ನಂದಾವರ, ಅರಿಫ್ ಗೂಡಿನಬಳಿ, ಸಾದಿಕ್ ಗೂಡಿನಬಳಿ, ಶ್ರೀನಿವಾಸ ಭಂಡಾರಿ, ಪ್ರೇಮನಾಥ್ .ಕೆ ಉಪಸ್ಥಿತರಿದ್ದರು. ಸುರೇಶ್ ಬಂಟ್ವಾಳ  ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News