ಮಂಜನಾಡಿಯಲ್ಲಿ ಸರಣಿ‌‌ ಕಳ್ಳತನ : ನಗ ನಗದು ಕಳವು

Update: 2020-09-23 04:57 GMT

ಕೊಣಾಜೆ : ಮಂಜನಾಡಿ ಬಳಿ ಮೂರು ಮನೆಗಳಿಂದ ಕಳ್ಳತನವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮಂಜನಾಡಿ ತೌಡುಗೋಳಿ ಕ್ರಾಸ್ ನ ಅಶ್ರಫ್, ಮಂಜನಾಡಿ ಅನ್ಸಾರ್ ನಗರದ ಮುಸ್ತಫ  ಹಾಗೂ ಮಂಜನಾಡಿ ಮಂಗಳಾಂತಿಯ ಸೂಫಿಕುಂಞಿ ಎಂಬವರ ಮನೆಗಳಿಗೆ ಕಳ್ಳರು ನುಗಿದ್ದಾರೆ.  ಸೂಫಿಕುಂಞಿ ಅವರ ಮನೆಯಿಂದ ಅಪಾರ ಪ್ರಮಾಣದ ನಗ ನಗದು ದೋಚಿರುವ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಸಿಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News