ಪಿಲಿಕುಳ ನಿಸರ್ಗಧಾಮ: ಸಾರ್ವಜನಿಕರ ವೀಕ್ಷಣೆಗೆ ಅವಕಾಶ

Update: 2020-09-23 15:18 GMT

ಮಂಗಳೂರು, ಸೆ.23: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಮೃಗಾಲಯ, ಲೇಕ್‌ಗಾರ್ಡನ್, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ, ಸಂಸ್ಕೃತಿ ಗ್ರಾಮವನ್ನು (ವಿಜ್ಞಾನ ಕೇಂದ್ರ ಮತ್ತು ತಾರಾಲಯ ಹೊರತುಪಡಿಸಿ) ಸೆ.24ರಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯ ಲಾಗುವುದು.

ವೀಕ್ಷಕರು ಸರಕಾರದ ಆದೇಶದಂತೆ ಸುರಕ್ಷಿತ ಅಂತರ ಕಾಯ್ದುಕೊಂಡು, ಮುಖಗವಸು (ಮಾಸ್ಕ್) ಧರಿಸಿ ವೀಕ್ಷಿಸಬಹುದಾಗಿದೆ. ಪ್ರತೀ ಸೋಮವಾರ ವಾರದ ರಜಾ ದಿನವಾಗಿದೆ ಎಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News