ಖಾಝಿ ಬೇಕಲ್ ಉಸ್ತಾದ್ ನಿಧನಕ್ಕೆ ಗಣ್ಯರು, ಸಂಘಸಂಸ್ಥೆಗಳಿಂದ ಸಂತಾಪ

Update: 2020-09-25 15:01 GMT

ಮಂಗಳೂರು : ಹಿರಿಯ ವಿದ್ವಾಂಸ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಯುಕ್ತ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರ ನಿಧನಕ್ಕೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕ, ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರಾದ ಅಲ್ ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್, ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಎಸ್. ಎಂ. ರಶೀದ್ ಹಾಜಿ ಅವರು ಸಂತಾಪ ಸೂಚಿಸಿದ್ದಾರೆ.

ಯುನಿವೆಫ್ ಕರ್ನಾಟಕ ಸಂತಾಪ

ಬೇಕಲ್ ಉಸ್ತಾದ್ ಅವರ ನಿಧನಕ್ಕೆ ಯುನಿವೆಫ್ ಕರ್ನಾಟಕ ತೀವ್ರ ಸಂತಾಪ ಸೂಚಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಹಲವು ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಘಟನೆಗಳಿಗೆ ಮಾರ್ಗದರ್ಶನವನ್ನು ಮಾಡುತ್ತಾ, ಸಮುದಾಯವು ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ಮುಂಚೂಣಿಯಲ್ಲಿ ನಿಂತು ಇತರರಿಗೆ ಮಾದರಿಯಾಗಿದ್ದರು. ತನ್ನ ಅನಾರೋಗ್ಯದ ಸಂದರ್ಭದಲ್ಲೂ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅನೇಕ ವಿದ್ಯಾಸಂಸ್ಥೆಗಳಲ್ಲಿ ಉಸ್ತುವಾರಿಯೂ, ಅಧ್ಯಕ್ಷರೂ, ಮಾರ್ಗದರ್ಶಕರೂ ಕಾರ್ಯ ನಿರ್ವಹಿಸಿದ್ದಾರೆ. ಅವರ ನಿಧನ ಸಮುದಾಯಕ್ಕೆ ಬಲು ದೊಡ್ಡ ನಷ್ಟ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷರಾದ ರಫೀಉದ್ದೀನ್ ಕುದ್ರೋಳಿ  ಸಂತಾಪ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಮುಹಮ್ಮದ್ ಅಲಿ ಕಮ್ಮರಡಿ ಅವರು ಬೇಕಲ್ ಉಸ್ತಾದ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉಡುಪಿ ಜಿಲ್ಲಾ ಖಾಝಿ ಅಲ್ ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ ನಿಧನಕ್ಕೆ ಜಮಾತೆ ಇಸ್ಲಾಮಿ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಸಯೀದ್ ಇಸ್ಮಾಯಿಲ್ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕ ಮುಸ್ಲಿಂ ಜಮಾತ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಝ್ವಿ ಹಾಗು ಕಾರ್ಯದರ್ಶಿ ಅಲ್ ಹಾಜ್ ಫೈರೋಝ್ ಅಹ್ಮದ್ ರಝ್ವಿ ಅವರು ಸಂತಾಪ ಸೂಚಿಸಿದ್ದಾರೆ. ಬೇಕಲ ಉಸ್ತಾದ್ ನಿಧನಕ್ಕೆ ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಅಮ್ಜದೀಸ್ ಅಸೋಸಿಯೇಷನ್ ತೀವ್ರ ಸಂತಾಪ ಸೂಚಿಸುತ್ತದೆ ಎಂದು ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎ. ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ ತಿಳಿಸಿದ್ದಾರೆ.

ಬೇಕಲ ಉಸ್ತಾದ್ ನಿಧನಕ್ಕೆ ಸಮಸ್ತ ಉಪಾಧ್ಯಕ್ಷರಾದ ಯು.ಎಂ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಝೈನುಲ್ ಆಬಿದೀನ್ ತಂಙಳ್, ಇಬ್ರಾಹಿಂ ಬಾಖವಿ ಕೆ.ಸಿ.ರೋಡು, ಕೆ.ಎಲ್.ಅಬ್ದುಲ್ ಖಾದರ್ ಅಲ್ ಖಾಸಿಮಿ ಪೇರಾಲ್ ಉಸ್ತಾದ್, ಬಂಬ್ರಾಣ ಉಸ್ತಾದ್,  ಪಾತೂರು ಉಸ್ತಾದ್, ಸುನ್ನೀ ಸಂದೇಶ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಾಜಿ ಕೆ.ಎಸ್. ಹೈದರ್ ದಾರಿಮಿ, ಜಂಇಯ್ಯತುಲ್ ಖುತಬಾಯಿನ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಎಸ್.ವೈ.ಎಸ್. ಕೇಂದ್ರ ಕೌಂಸಿಲರಾದ ಮುಸ್ತಫ ಫೈಝಿ ಕಿನ್ಯ ದಾರುಲ್ ಖರ್‍ಆನ್ ಮಹಿಳಾ ಶರೀಅತ್ ಕಾಲೇಜಿನ ವ್ಯವಸ್ಥಾಪಕರಾದ ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಎ.ಎಚ್.ನೌಶಾದ್ ಹಾಜಿ ಸೂರಲ್ಪಾಡಿ, ಕಿಸಾ ಗ್ರೂಪಿನ ವ್ಯಹಸ್ಥಾಪಕರಾದ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಸಿದ್ದೀಖ್ ಫೈಝಿ ಕರಾಯ, ಎಂ.ಎ.ಅಬ್ದುಲ್ಲಾ ಹಾಜಿ ಬೆಳ್ಮ, ಎಂ.ಆರ್.ಗ್ರೂಪಿನ ರಫೀಖ್ ಮೌಲವಿ ಅಜ್ಜಾವರ, ಸಲೀಂ ಯಮಾನಿ ಬೋಳಂತೂರು, ಕೆ.ಎಚ್.ಹುಸೈನ್ ಕುಂಞಿ ಹಾಜಿ ಕಿನ್ಯ, ಕೆ.ಸಿ ಇಸ್ಮಾಯಿಲ್ ಹಾಜಿ ಕಿನ್ಯ, ಅಬ್ದುಲ್ ಖಾದರ್ ಹಾಜಿ, ಕೆ.ಎಸ್.ಮೊಯ್ದಿನ್ ಪಾಲಡಿ, ಸಿ.ವಿ.ಶಾಕಿರ್, ಹಮೀದ್ ಖುತುಬಿಯ್ಯಾ ನಗರ, ಅಬ್ಬು ಹಾಜಿ, ಎಂ.ಜಿ.ಶಾಹುಲ್ ಹಮೀದ್, ಇಂಮ್ರಾನ್ ಅಡ್ಡೂರು, ಶಂಸು ಸೂರಲ್ಪಾಡಿ. ಪಿ.ಐ.ಅಹ್ಮದ್ ಪಡ್ಪು ಫತ್ತಾಹ್ ಫೈಝಿ, ನಾಸಿರ್ ದಾರಿಮಿ, ಅಶ್ರಫ್ ಮಾರಾಟಿಮೂಲೆ. ಎಸ್.ಬಿ. ಹನೀಫ್, ಇಬ್ರಾಹೀಂ ಕೊಣಾಜೆ, ಅಶ್ರಫ್ ಬಟ್ಕಲ್, ಡಿಲೆಕ್ಷ್ ಅಹ್ಮದ್ ಹಾಜಿ ಹಾಗೂ  ಸುನ್ನೀ ಸಂದೇಶ ಪತ್ರಿಕಾ ಬಲಗದ ಹಾಗೂ ಕಿಸಾ ಕಾರ್ಯಕರ್ತರು ಸಂತಾಪ ಸೂಚಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು, ಕೇಂದ್ರ ಸಮಿತಿ ಅಧ್ಯಕ್ಷರಾದ ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್, ಕುಂಬೋಳ್, ಕಾರ್ಯಧ್ಯಕ್ಷರಾದ ಅಲ್ ಹಾಜ್ ಹಾತೀಂ ಖಾನ್ ಅಬ್ದುಲ್ ಖಾದರ್ ಕಂಚಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ, ಕೋಶಾಧಿಕಾರಿ ಸುಲೈಮಾನ್ ಸೂರಿಂಜೆ, ಮರ್ಕಝ್ ತಅ್ ಲೀಮುಲ್ ಇಹ್ಸಾನ್, ಮೂಳೂರು ಉಪಾಧ್ಯಕ್ಷರಾದ ಅಲ್ ಹಾಜ್ ಬದ್ರುದ್ದೀನ್ ಬಜ್ಪೆ, ಕೋಶಾಧಿಕಾರಿ ಎಂ.ಎಚ್.ಬಿ. ಮೂಳೂರು, ಜನರಲ್ ಮ್ಯಾನೇಜರ್ ಯು.ಕೆ.ಮುಸ್ತಫಾ ಸಅದಿ, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಬಂಟ್ವಾಳ ಜೆಡಿಎಸ್ ಮುಖಂಡ ಹಾರೂನ್ ರಶೀದ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಅಧ್ಯಕ್ಷ ರಿಯಾಝ್ ಕಣ್ಣೂರು, ಕಣ್ಣೂರು ಚಾರಿಟೇಬಲ್ ಟ್ರಸ್ಟ್ ‌ನ ಕಾರ್ಯದರ್ಶಿ ಸಿತಾರ್ ಮಜೀದ್ ಹಾಜಿ, ದಾರಿಮೀಸ್ ರಾಜ್ಯಾಧ್ಯಕ್ಷ ಎಸ್.ಬಿ.ದಾರಿಮಿ, ಕರ್ನಾಟಕ ಎಸ್.ವೈ.ಎಸ್ . ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಮೌಲನಾ ಅಬ್ದುಲ್ ಅಝೀಝ್ ದಾರಿಮಿ , ಪ್ರಧಾನ ಕಾರ್ಯದರ್ಶಿ ಕೆ.ಎಲ್.ಉಮರ್ ದಾರಿಮಿ , ಸಂಘಟನಾ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ, ಮದ್ರಸ ಮೆನೇಜ್ಮೆಂಟ್ ದ.ಕ.ಜಿಲ್ಲಾದ್ಯಕ್ಷ ಐ.ಮೊಹಿದಿನಬ್ಬ ಹಾಜಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ಕೊಡಾಜೆ, 'ಸಮಸ್ತ' ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಆಲ್ ಇಂಡಿಯ ಮುಸ್ಲಿಂ ಡೆವಲಪ್ ಮೆಂಟ್ ರಾಜ್ಯ ಉಪಾದ್ಯಕ್ಷ ಎಸ್.ಅಬೂಬಕ್ಕರ್ ಸಜಿಪ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ, ಮುಸ್ಲಿಂ ಲೀಗ್ ದ.ಕ.ಜಿಲ್ಲಾದ್ಯಕ್ಷ ಅಬ್ದುಲ್ ರಹಿಮಾನ್ ದಾರಿಮಿ ತಬೂಕ್, ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ ಅದ್ಯಕ್ಷ ಹನೀಫ್ ಬಗ್ಗುಮೂಲೆ ಮತ್ತು ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಎಸ್‌ಡಿಪಿಐ ಸಂತಾಪ

ಬೇಕಲ್ ಉಸ್ತಾದ್ ಅವರ ನಿಧನಕ್ಕೆ ಎಸ್‌ಡಿಪಿಐ ತೀವ್ರ ಸಂತಾಪ ಸೂಚಿಸಿದೆ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್ ಎಚ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News