ಅ.1ರಿಂದ ಆಯುಧ ಪರವಾನಿಗೆ ಸೇವೆಗೆ ಆನ್‌ಲೈನ್ ಅರ್ಜಿ

Update: 2020-09-25 06:00 GMT

ಮಂಗಳೂರು, ಸೆ.25: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಯುಧ ಪರವಾನಿಗೆಯ ಎಲ್ಲ ಸೇವೆಗಳಿಗೆ ಅಕ್ಟೋಬರ್ 1ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇಚ್ಛಿಸುವವರು www.mha.gov.inಗೆ ಲಾಗಿನ್ ಆಗಿ SERVICES > ARMS LICENCEONLINE PORTALಗೆ ಹೋಗಿ ಕಡ್ಡಾಯವಾಗಿ UIN ಸಂಖ್ಯೆಯನ್ನು ಹಾಕಿ ಆಯುಧಗಳ ಪರವಾನಿಗೆ ಸೇವೆ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ದೂ.ಸಂ.: 0824-2220603ಗೆ ಕರೆ ಮಾಡಬಹುದು ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News