ವಿರಾಟ್ ಕೊಹ್ಲಿ-ಅನುಷ್ಕಾ ಕುರಿತ ಹೇಳಿಕೆಗೆ ಗವಾಸ್ಕರ್ ಸ್ಪಷ್ಟನೆ ಏನು ಗೊತ್ತಾ?

Update: 2020-09-25 14:30 GMT

ಹೊಸದಿಲ್ಲಿ, ಸೆ.25: ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ಗುರುವಾರ ನಡೆದ ಐಪಿಎಲ್‌ನ 6ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಕುರಿತು ಹೇಳಿರುವ ಹೇಳಿಕೆಗೆ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಇಂದು ಸ್ಪಷ್ಟನೆ ನೀಡಿದ್ದಾರೆ.

    ‘‘ಜನರು ನನ್ನ ಮಾತನ್ನು ಸಂಪೂರ್ಣ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನನ್ನ ಮಾತನ್ನು ತಪ್ಪಾಗಿ ಬಿಂಬಿಸಿದ ಕಾರಣ ವಿವಾದ ಉಂಟಾಗಿದೆ. ಕೊಹ್ಲಿಯ ವೈಫಲ್ಯಕ್ಕೆ ಅನುಷ್ಕಾರನ್ನು ನಿಂದಿಸಿಲ್ಲ, ಅವರ ಬಗ್ಗೆ ಅಶ್ಲೀಲವಾಗಿಯೂ ಮಾತನಾಡಿಲ್ಲ. ನಾನು ಆಕೆಗೆ ಎಲ್ಲಿಯೂ ನಿಂದಿಸಿಲ್ಲ. ಅನುಷ್ಕಾ ಅವರು ಕೊಹ್ಲಿಗೆ ಬೌಲಿಂಗ್ ಮಾಡುತ್ತಿರುವುದು ವೀಡಿಯೊದಲ್ಲಿ ಕಾಣುತ್ತಿದೆ ಎಂದಿದ್ದೆ. ಲಾಕ್‌ಡೌನ್ ಅವಧಿಯಲ್ಲಿ ಕೊಹ್ಲಿ ಅಷ್ಟೇ ಆಡಿದ್ದಾರೆ ಎಂದಿದ್ದೆ. ಕೊಹ್ಲಿ ಶತಕ ಗಳಿಸಿದಾಗ ಯಾರೂ ಕೂಡ ಅನುಷ್ಕಾಗೆ ಶ್ರೇಯಸ್ಸು ನೀಡುವುದಿಲ್ಲ. ಇಂತಹ ವಿಚಾರವನ್ನು ಎತ್ತಿರುವ ಮೊದಲ ವ್ಯಕ್ತಿ ನಾನು. ಭಾರತ ಕ್ರಿಕೆಟ್ ತಂಡ ವಿದೇಶ ಪ್ರವಾಸಕ್ಕೆ ತೆರಳುವಾಗ ಆಟಗಾರರ ಪತ್ನಿ ಹಾಗೂ ಗೆಳತಿಯರು ಹೋಗುವುದಕ್ಕೆ ಅವಕಾಶ ನೀಡಬೇಕೆಂದು ನಾನು ಒತ್ತಾಯಿಸಿದ್ದೆ. ಎಲ್ಲರಂತೆಯೇ ನಮಗೂ ಕೂಡ ಕ್ರಿಕೆಟ್ ಒಂದು ವೃತ್ತಿಯಾಗಿದೆ. ನಾನು ವೀಕ್ಷಕವಿವರಣೆ ವೇಳೆ ಹೇಳಿರುವ ಮಾತನ್ನು ತಿರುಚಲಾಗಿದೆ. ಆಟಗಾರರು ಲಾಕ್‌ಡೌನ್ ವೇಳೆ ಸರಿಯಾಗಿ ಅಭ್ಯಾಸ ನಡೆಸಿಲ್ಲ ಎನ್ನುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಮುಂಬೈನಲ್ಲಿ ತಮ್ಮ ಮನೆಯ ಆವರಣದಲ್ಲಿ ಕೊಹ್ಲಿ ಅವರು ಅನುಷ್ಕಾ ಅವರೊಂದಿಗೆ ಟೆನಿಸ್ ಬಾಲ್ ಕ್ರಿಕೆಟ್ ಆಡಿರುವ ವೀಡಿಯೊವನ್ನು ನಾನು ನಿದರ್ಶನವಾಗಿ ನೀಡಿದ್ದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News