ಮಹಾರಾಷ್ಟ್ರದಲ್ಲಿ ಕೃಷಿ ಮಸೂದೆಗಳ ಜಾರಿ ಸಾಧ್ಯತೆಯಿಲ್ಲ: ಡಿಸಿಎಂ

Update: 2020-09-25 16:56 GMT

ಪುಣೆ,ಸೆ.25: ಕೃಷಿ ಕ್ಷೇತ್ರ ಸುಧಾರಣಾ ಮಸೂದೆಗಳು ರಾಜ್ಯದಲ್ಲಿ ಜಾರಿಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುವುದಾಗಿ ಸಮ್ಮಿಶ್ರ ಸರಕಾರದ ಅಂಗ ಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್ ಹೇಳಿವೆ.

ಶುಕ್ರವಾರ ಇಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು, ನೂತನ ಮಸೂದೆಗಳಿಗೆ ರೈತರು,ಎನ್‌ಸಿಪಿ ಮತ್ತು ಇತರ ಪಕ್ಷಗಳ ವಿರೋಧವಿದೆ. ಈ ಮಸೂದೆಗಳು ರಾಜ್ಯದಲ್ಲಿ ಜಾರಿಗೊಳ್ಳದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಇದೇ ವೇಳೆ ತಲೆಯೆತ್ತಬಹುದಾದ ಇತರ ವಿಷಯಗಳ ಬಗ್ಗೆಯೂ ನಾವು ಗಮನ ಹರಿಸಬೇಕಾಗುತ್ತದೆ. ಸರಕಾರವು ಈ ವಿಷಯದಲ್ಲಿ ಕಾನೂನು ತಜ್ಞರ ಸಲಹೆಯನ್ನು ಕೋರಿದೆ ’ಎಂದು ತಿಳಿಸಿದರು.

 ಇದಕ್ಕೂ ಮುನ್ನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್ ಅವರು, ನಾವು ಈ ಬಗ್ಗೆ ಚರ್ಚಿಸಿ,ನೂತನ ಕೃಷಿ ಮಸೂದೆಗಳನ್ನು ಜಾರಿಗೊಳಿಸದಿರುವ ಕುರಿತು ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News