1 ಕೆಜಿ ಗಾಂಜಾ ವಶ ಎಂದು ಹೇಳಿ ಉಳಿದ 159 ಕೆಜಿ ಗಾಂಜಾ ಮಾರಾಟ ಮಾಡಿದ ಪೊಲೀಸರು !

Update: 2020-09-26 13:23 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ವ್ಯಕ್ತಿಯೊಬ್ಬನಿಂದ 160 ಕೆಜಿ ಗಾಂಜಾ ವಶಪಡಿಸಿಕೊಂಡ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿ ತಾವು ಕೇವಲ ಒಂದು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾಗಿ ಹೇಳಿ ಉಳಿದ ಗಾಂಜಾ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ನಾಲ್ಕು ಮಂದಿಯೂ ಇದೀಗ ಸೇವೆಯಿಂದ ವಜಾಗೊಂಡಿದ್ದಾರೆ.

ಜಹಾಂಗೀರ ನಗರ್ ಪೊಲೀಸ್ ಠಾಣೆಯ ಇಬ್ಬರು ಎಸ್‍ಐಗಳು ಹಾಗೂ ಇಬ್ಬರು ಹೆಡ್ ಕಾನ್‍ಸ್ಟೇಬಲ್‍ಗಳ ತಂಡವೊಂದು ಸೆಪ್ಟೆಂಬರ್ 11ರಂದು ದಾಳಿಯೊಂದನ್ನು ನಡೆಸಿ 159 ಕೆಜಿ ಗಾಂಜಾ ವಶಪಡಿಸಿಕೊಂಡು ಅನಿಲ್ ಎಂಬ ಹೆಸರಿನ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರೂ ರೂ 1.5 ಲಕ್ಷ ಲಂಚ ಪಡೆದು ಆತನನ್ನು ಬಿಡುಗಡೆಗೊಳಿಸಲಾಗಿತ್ತೆನ್ನಲಾಗಿದೆ. ನಂತರ ಒಂದು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾಗಿ ಹೇಳಿಕೊಂಡು ಉಳಿದ ಗಾಂಜಾವನ್ನು ಪೊಲೀಸರೇ ಮಾರಾಟ ಮಾಡಿದ್ದಾರೆಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News