ಅಧ್ಯಕ್ಷೀಯ ಚುನಾವಣಾ ಫಲಿತಾಂಶ ತಿಂಗಳ ಕಾಲ ತಿಳಿಯದೇ ಇರಬಹುದು: ಟ್ರಂಪ್

Update: 2020-09-26 16:03 GMT

ವಾಶಿಂಗ್ಟನ್, ಸೆ. 26: ಅಂಚೆ ಮತಪತ್ರಗಳ ಕುರಿತ ವಿವಾದದ ಹಿನ್ನೆಲೆಯಲ್ಲಿ, ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ಅಮೆರಿಕನ್ನರಿಗೆ ತಿಂಗಳುಗಳ ಕಾಲ ತಿಳಿಯದೇ ಇರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಅರ್ಧದಷ್ಟು ಮತದಾರರು ಅಂಚೆ ಮತಪತ್ರಗಳನ್ನು ಬಳಸುವ ಸಾಧ್ಯತೆಯಿದೆ. ಆದರೆ, ಅಂಚೆ ಮತಪತ್ರಗಳ ವ್ಯವಸ್ಥೆಗೆ ಟ್ರಂಪ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನವೆಂಬರ್ 3ರಂದು ನಡೆಯಲಿರುವ ಚುನಾವಣೆಯ ಬಳಿಕ, ವಿಜಯಿ ಅಭ್ಯರ್ಥಿಯ ಘೋಷಣೆಗೆ ಹಲವಾರು ದಿನಗಳು ಬೇಕಾಗಬಹುದು ಎಂಬುದಾಗಿ ಚುನಾವಣಾ ಪರಿಣತರು ಹೇಳುತ್ತಾರೆ. ಚುನಾವಣಾ ದಿನದ ಬಳಿಕ ಬರುವ ಅಂಚೆ ಮತಪತ್ರಗಳನ್ನು ಲೆಕ್ಕ ಮಾಡಲು ಅಧಿಕಾರಿಗಳಿಗೆ ಸಮಯ ಬೇಕಾಗುತ್ತದೆ ಎಂದು ಅವರು ಅದಕ್ಕೆ ಕಾರಣ ನೀಡುತ್ತಾರೆ.

ನಾನು ಗೆದ್ದಿದ್ದೇನೆಯೇ, ಸೋತಿದ್ದೇನೆಯೇ ಎನ್ನುವುದು ನನಗೆ ತಕ್ಷಣ ತಿಳಿಯಬೇಕು. ಅಂಚೆ ಮತಪತ್ರಗಳು ಬರುವವರೆಗೆ ಕಾಯಲು ನನಗೆ ಸಾಧ್ಯವಿಲ್ಲ ಎಂದು ವರ್ಜೀನಿಯದ ನ್ಯೂಪೋರ್ಟ್ ನ್ಯೂಸ್‌ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News