ಮುಕುಲ್ ರಾಯ್ ಗೆ ಭಡ್ತಿ: ಪ.ಬಂಗಾಳ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಬಂಡಾಯ

Update: 2020-09-26 17:33 GMT

ಕೋಲ್ಕತಾ,ಸೆ.26: ಬಿಜೆಪಿ ಪಕ್ಷದಲ್ಲಿನ ಪದಾಧಿಕಾರಿಗಳ ಪುನರ ರಚನೆ ಪ್ರಕ್ರಿಯೆ ಪಶ್ಚಿಮಬಂಗಾಳ ಬಿಜೆಪಿ ಘಟಕದಲ್ಲಿ  ಅಸಮಾಧಾನಕ್ಕೆ ಕಾರಣವಾಗಿದೆ, ಪಶ್ಚಿಮಬಂಗಾಳದಲ್ಲಿ ದೀರ್ಘ ಸಮಯ ಕೆಲಸ ಮಾಡಿರುವ ನಾಯಕರ ಪೈಕಿ ಒಬ್ಬರಾಗಿರುವ ರಾಹುಲ್ ಸಿನ್ಹಾ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹೊರಗಿಟ್ಟು ತೃಣಮೂಲ ಕಾಂಗ್ರೆಸ್ನ ಮಾಜಿ ಸಂಸದ, ಪಕ್ಷಾಂತರಿ ಮುಕುಲ್ ರಾಯ್ ಗೆ ಭಡ್ತಿ ನೀಡಲಾಗಿದೆ.

ಕಳೆದ 40 ವರ್ಷಗಳಿಂದ ಬಿಜೆಪಿಯಲ್ಲಿ ಸೈನಿಕನಂತೆ ಸೇವೆ ಸಲ್ಲಿಸಿದ್ದೇನೆ. ತೃಣಮೂಲ ಕಾಂಗ್ರೆಸ್ ನಾಯಕನೊಬ್ಬ ಪಕ್ಷಕ್ಕೆ ಬಂದಿರುವುದಕ್ಕೆ ನನ್ನನ್ನು ಬದಿಗೆ ಸರಿಸಲಾಗಿದೆ.  ಹುಟ್ಟಿನಿಂದ ಪಕ್ಷಕ್ಕಾಗಿ ದುಡಿದಿರುವುದಕ್ಕೆಇದಕ್ಕಿಂತ ಬೇರೆ ದುರದೃಷ್ಟಕರ ವಿಚಾರ ಬೇರೊಂದಿಲ್ಲ. ನಾನು ಇದಕ್ಕಿಂತ ಹೆಚ್ಚೇನು ಹೇಳಲಾರೆ. ನನ್ನ ಮುಂದಿನ ಹೆಜ್ಜೆಯನ್ನು 10-15 ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದು ಸಿನ್ಹಾ ಹೇಳಿದ್ದಾರೆ.

ರಾಯ್ ಪಕ್ಷದ ಉಪಾಧ್ಯಕ್ಷರಾಗಿ ಭಡ್ತಿ ಪಡೆದಿದ್ದು, ರಾಯ್ ಅವರ ಆಪ್ತ ಮಾಜಿ ಟಿಎಂಸಿ ಸಂಸದ ಅನುಪಮ ಹಝ್ರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News