ಚೀನಾದ ಕಲ್ಲಿದ್ದಲು ಗಣಿ ದುರಂತ: 16 ಕಾರ್ಮಿಕರು ಮೃತ್ಯು

Update: 2020-09-27 09:12 GMT

  ಬೀಜಿಂಗ್, ಸೆ.27: ನೈರುತ್ಯ ಚೀನಾದ ಕಲ್ಲಿದ್ದಲು ಗಣಿಯ ತಳಭಾಗದಲ್ಲಿ ಸಿಲುಕಿ ಹಾಕಿಕೊಂಡಿದ್ದ ಹದಿನಾರು ಕಾರ್ಮಿಕರು ರವಿವಾರ ಕಾರ್ಬನ್ ಮಾನಕ್ಸೈಡ್ ವಿಷ ಸೇವಿಸಿ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸರಕಾರಿ ಸ್ವಾಮ್ಯದ ಪ್ರಸಾರ ಸಂಸ್ಥೆ ಸಿಸಿಟಿವಿ ವರದಿ ಮಾಡಿದೆ.

ಮುಂಜಾನೆ ಒಂದು ಕನ್ವೇಯರ್ ಬೆಲ್ಟ್ ಬೆಂಕಿಗೆ ಆಹುತಿಯಾಯಿತು. ಇದು ಅಪಾಯಕಾರಿ ಮಟ್ಟದ ಇಂಗಾಲದ ಮಾನಾಕ್ಸೈಡ್ ಅನ್ನು ಉತ್ಪಾದಿಸಿತು. ಬದುಕುಳಿದವರ ಪ್ರಾಣ ಉಳಿಸಲು ವೈದ್ಯರು ಶ್ರಮಿಸುತ್ತಿದ್ದಾರೆ ಎಂದು ಸರಕಾರಿ ಸುದ್ದಿಸಂಸ್ಥೆ ಕ್ಸಿನ್ಹುವಾ ಸರಕಾರವನ್ನು ಉಲ್ಲೇಖಿಸಿ ವರದಿ ಮಾಡಿದೆ.

ಘಟನೆಗೆ ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ. ಚೀನಾದಲ್ಲಿ ಗಣಿಗಾರಿಕೆಯ ಅಪಘಾತಗಳು ಸಾಮಾನ್ಯವಾಗಿವೆ. ಅಲ್ಲಿನ ಕಂಪೆನಿಗಳು ಕಳಪೆ ಸುರಕ್ಷತಾ ದಾಖಲೆಯನ್ನು ಹೊಂದಿವೆ ಹಾಗೂ ನಿಯಮಗಳು ಹೆಚ್ಚಾಗಿ ದುರ್ಬಲವಾಗಿ ಜಾರಿಗೊಳಿಸಲಾಗುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News