ಲೂಡೊ ಆಟದಲ್ಲಿ ಸೋಲು, ತಂದೆಯ ವಿರುದ್ಧ ಕುಟುಂಬ ನ್ಯಾಯಾಲಯದ ಮೊರೆ ಹೋದ ಪುತ್ರಿ!

Update: 2020-09-27 13:19 GMT

ಭೋಪಾಲ್, ಸೆ.27: ತನ್ನ ತಂದೆಯ ವಿರುದ್ಧ ಲೂಡೊ ಆಟವನ್ನು ಸೋತ 24ರ ವಯಸ್ಸಿನ ಪುತ್ರಿಯು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿರುವ ಬಹು ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಕೌಟುಂಬಿಕ ನ್ಯಾಯಾಲಯದ ಸಮಾಲೋಚಕಿ ಸರಿತಾ ರಜನಿ ಅವರಿಗೆ ಇಂತಹದ್ದೊಂದಿಗೆ ಪ್ರಕರಣ ಲಭಿಸಿದೆ.

ಲುಡೋ ಆಟದ ಫಲಿತಾಂಶ ಬಂದಾಗಿನಿಂದಲೂ ತಾನು ತನ್ನ ತಂದೆಯಿಂದ ದೂರವಾಗುತ್ತಿರುವ ಅನುಭವವಾಗುತ್ತಿದೆ. ತಾನು ತಂದೆಯ ಬಗೆಗಿನ ಗೌರವವನ್ನು ಕಳೆದುಕೊಂಡಿದ್ದೇನೆ. ಹಾಗೂ ಅವರನ್ನು ತಂದೆ ಎಂದು ಕರೆಯಲು ಹಿಂಜರಿಯುತ್ತಿರುವೆ ಎಂದು  ಯುವತಿ ಹೇಳಿದ್ದಾರೆ. ಈ ಹಿಂದೆ ತಂದೆ-ಮಗಳ ಸಂಬಂಧ ಸುಮಧುರವಾಗಿತ್ತು. ಲುಡೋ ಆಟ ಪಂದ್ಯದ ಫಲಿತಾಂಶ ಈ ಬಿಕ್ಕಟ್ಟು ಸೃಷ್ಟಿಸಿದೆ ಎಂದು  ಸಮಾಲೋಚಕಿ ರಜನಿ ಹೇಳಿದ್ದಾರೆ.

ನಾನು ಯುವತಿಯೊಂದಿಗೆ ನಾಲ್ಕು ಬಾರಿ ಸಭೆ ನಡೆಸಿದ್ದು, ಸಕಾರಾತ್ಮಕ ಬದಲಾವಣೆ ಕಂಡುಬರುತ್ತಿದೆ. ಅತ್ಯಂತ ಮುಖ್ಯವಾಗಿ ಲಾಕ್ ಡೌನ್ ಸಮಯದಲ್ಲಿ ಸಮಾಜದಲ್ಲಿ ಕ್ಷಿಪ್ರ ಬದಲಾವಣೆಯಾಗಿದೆ. ಅಲ್ಲಿ ಎಲ್ಲರಿಂದಲೂ ಹೆಚ್ಚಿನದನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಜನಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News