​ಹಿರಿಯ ಕಾಂಗ್ರೆಸ್ ನಾಯಕ ಜೆ. ಉಮೇಶ್ ಚಂದ್ರ ನಿಧನ

Update: 2020-09-28 12:17 GMT

ಮಂಗಳೂರು : ಹಿರಿಯ ಕಾಂಗ್ರೆಸ್ ನಾಯಕರಾದ ಜೆ. ಉಮೇಶ್ ಚಂದ್ರ ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸಾಗಿತ್ತು. ಅವರು ಒಬ್ಬ ಸಹೋದರ ಮತ್ತು ಓರ್ವ ಸಹೋದರಿ ಯನ್ನು ಅಗಲಿದ್ದಾರೆ.

ಅವರು ಎಐಸಿಸಿ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಅದಲ್ಲದೆ ಅಖಿಲ ಇಂಟಕ್  ಪದಾಧಿಕಾರಿಯಾಗಿ, ಮಾಜಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO ) ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅಂದಿನ ಕಾಲದಲ್ಲಿ ಅಖಿಲ ಭಾರತ ಯುವ ಇಂಟಕ್ ನ್ನುಅಂತರ  ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ನವ ಮಂಗಳೂರು ಬಂದರು ಮಂಡಳಿ ಟ್ರಸ್ಟಿ ಯಾಗಿ, ಕೆನರಾ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅದಲ್ಲದೆ ಜೆಪ್ಪಿನ ಮೊಗರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಗೌರವ ಅಧ್ಯಕ್ಷ ರಾಗಿ, ಪ್ರಸ್ತುತ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.

ಮಾಜಿ ಶಾಸಕರಾದ ಜೆ. ಆರ್. ಲೋಬೊ, ಐವನ್ ಡಿಸೋಜಾ, ಪಕ್ಷದ ಮುಖಂಡರುಗಳಾದ ಕಳ್ಳಿಗೆ ತಾರಾನಾಥ್ ಶೆಟ್ಟಿ, ಅಬ್ದುಲ್ ಸಲೀಂ, ಸದಾಶಿವ ಶೆಟ್ಟಿ, ಸದಾಶಿವ ಉಳ್ಳಾಲ, ಪಿ. ವಿ. ಮೋಹನ್, ಕಾರ್ಪೊರೇಟರ್ ಪ್ರವೀಣ್ ಆಳ್ವ, ನಾಗೇಂದ್ರ ಕುಮಾರ್, ಸುರೇಶ್ ಶೆಟ್ಟಿ, ಟಿ. ಕೆ. ಸುಧೀರ್, ಸದಾಶಿವ ಅಮೀನ್, ನೀರಜ್ ಪಾಲ್, ರಮಾನಂದ ಪೂಜಾರಿ, ಭರತೇಶ್ ಅಮೀನ್, ದುರ್ಗಾ ಪ್ರಸಾದ್, ಅಶೋಕ್ ಕುಡುಪಾಡಿ, ಉಮೇಶ್ ದೇವಾಡಿಗ, ಸುಧೀರ್ ಕಡೆಕಾರ್, ಸುಧಾಕರ್  ಮೊದಲಾದವರು ಅಂತಿಮ ದರ್ಶನ ಪಡೆದರು.

ಉಮೇಶ್ ಚಂದ್ರ ರವರ ನಿಧನಕ್ಕೆ ಮಾಜಿ ಕೇಂದ್ರ ಸಚಿವರಾದ ಬಿ. ಜನಾರ್ದನ ಪೂಜಾರಿ, ಓಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯಿಲಿ, ಮಾಜಿ ಸಚಿವರಾದ ಯು. ಟಿ. ಖಾದರ್, ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯ ಚಂದ್ರ, ಮಾಜಿ ಶಾಸಕರಾದ ಎನ್. ಎಂ. ಅಡ್ಯಂತಾಯ, ವಿಜಯ ಕುಮಾರ್ ಶೆಟ್ಟಿ ಯವರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News