ವಿಖಾಯ ತಂಡದ ಸಾಮಾಜಿಕ ಕಾಳಜಿ ಸಮಾಜಕ್ಕೆ ಮಾದರಿಯಾಗಿದೆ: ಪುನೀತ್ ಗಾಂವ್ಕರ್

Update: 2020-09-28 13:02 GMT

ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ದ.ಕ.ಜಿಲ್ಲೆ ಇದರ ನಿರ್ದೇಶನದಂತೆ ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯ ಜಂಟಿ ಆಶ್ರಯದಲ್ಲಿ ಚೊಕ್ಕಬೆಟ್ಟು ಎಮ್ ಜೆ ಎಮ್ ಹಾಲಿನಲ್ಲಿ ಸೋಮವಾರ ರಕ್ತ ದಾನ ಶಿಬಿರ ನಡೆಯಿತು.

ಸುರತ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕರಾದ ಪುನೀತ್ ಗಾಂವ್ಕರ್ ಉದ್ಘಾಟಿಸಿ ನಂತರ ಮಾತನಾಡಿದ ಅವರು ವಿಖಾಯ ತಂಡವು ಸಮಾಜ ಮುಖಿ ಕಾರ್ಯಕ್ರಮ ನಡೆಸುತ್ತಿದೆ. ಅದರ ಸಾಮಾಜಿಕ ಕಾಳಜಿ ಮಾದರಿಯಾಗಿದೆ ಎಂದರು.

ಸೂರಿಂಜೆ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ದುಅ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷರಾದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದ ಕಾರ್ಯಕ್ಷಮತೆಯನ್ನು ವಿವರಿಸಿದರು. ಜೀವ ಪಣಕ್ಕಿಟ್ಟು ವಿಖಾಯ ಕಾರ್ಯಕರ್ತರು ನಡೆಸುವ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯ ಉಪಾಧ್ಯಕ್ಷರಾದ ಕಮಾಲ್ ಚೊಕ್ಕಬೆಟ್ಟು ವಹಿಸಿದ್ದರು. ಈ ಸಂದರ್ಭ ಸಯ್ಯಿದ್ ಇಸ್ಮಾಯಿಲ್ ತಂಙಲ್ ಅಧ್ಯಕ್ಷರು ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ, ಚೊಕ್ಕಬೆಟ್ಟು ಮಸೀದಿ ಅಧ್ಯಕ್ಷರಾದ ಅಮೀರ್ ಹಸೈನ್, ಲಿಯಾಕತ್ ಅಲಿ ಕಾರ್ಯದರ್ಶಿ ಮಸೀದಿ ಸೂರಿಂಜೆ, ನವಾಝ್ ಕಾರ್ಯದರ್ಶಿ ಎಂ ಜೆ ಎಮ್ ಚೊಕ್ಕಬೆಟ್ಟು ,ಆಸಿಫ್ ಉದ್ಯಮಿ ಚೊಕ್ಕಬೆಟ್ಟು ಉಪಾಧ್ಯಕ್ಷರು ಎಮ್ ಜೆ ಎಮ್ ಚೊಕ್ಕಬೆಟ್ಟು, ಹಮೀದ್ ಸೂರಿಂಜೆ, ಹನೀಫ್ ಸೂರಿಂಜೆ, ಸಯೀದ್ ಚೊಕ್ಕಬೆಟ್ಟು, ಇಸ್ಮಾಯಿಲ್ ಕೊಳ್ನಾಡು, ಯಹ್ಯಾ ಹಳೆಯಂಗಡಿ, ಅಲ್ಫಾಝ್ ಬೊಳ್ಳೂರು, ಶಂಸುದ್ದೀನ್ ಇಡ್ಯ, ಶಿಹಾಬುದ್ದೀನ್ ಕೊಳ್ನಾಡು, ದಾವೂದ್ ಹನಫೀ ಸೂರಿಂಜೆ ಚೇಯರ್ಮೇನ್ ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯ ಸ್ವಾಗತಿಸಿ ಕಾರ್ಯಕ್ರಮ ವನ್ನು ನಿರೂಪಿಸಿದರು.

ಇಂಮ್ತಿಯಾಝ್ ಇಡ್ಯ ವಂದಿಸಿರು. ಕಾರ್ಯಕ್ರಮ ದಲ್ಲಿ 61 ಯುನಿಟ್‌ ರಕ್ತ ಸಂಗ್ರಹಿಸಲಾಯಿತು. ಸುರತ್ಕಲ್ ವಲಯದ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ಮತ್ತು ಗಣ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News