ಒಂದು ಭೂಮಿ ಒಂದು ಮನೆ ಆನ್‌ಲೈನ್ ಕಾರ್ಯಕ್ರಮ

Update: 2020-09-28 14:36 GMT

ಉಡುಪಿ, ಸೆ. 28: ಡಬ್ಲೂ.ಡಬ್ಲೂ.ಎಫ್ ಇಂಡಿಯಾ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯದ 1ರಿಂದ 8ನೇ ತರಗತಿಯ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ‘ಒಂದು ಭೂಮಿ ಒಂದು ಮನೆ’ ಎಂಬ ಆನ್‌ಲೈನ್ ಕಾಯರ್ಕ್ರಮವನ್ನು ಆಯೋಜಿಸಲಾಗುತ್ತಿದೆ.

ಗೂಗಲ್ ಜಾಲತಾಣದಲ್ಲಿ ಲಿಂಕ್ ಬಳಸಿ ನೊಂದಣಿ ಮಾಡಿಕೊಂಡು ನವೆಂಬರ್‌ವರೆಗೆ ಪ್ರತೀ ವಾರ ಅರ್ಧ ಗಂಟೆ ನಡೆಯುವ ಈ ಕಾರ್ಯಕ್ರಮ ವನ್ನು ದಿಕ್ಷಾ ಅಥವಾ ಫೇಸ್‌ಬುಕ್‌ನಲ್ಲಿಯೂ ವೀಕ್ಷಿಸಬಹುದು. ಕಾರ್ಯಕ್ರಮದ ನಂತರ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಿ, ಫೀಡ್ ಬ್ಯಾಕ್ ನೀಡಬೇಕಾಗುತ್ತದೆ. ಶಿಕ್ಷಕರ ಅಥವಾ ಪೋಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಭಾಗವಹಿಸಿದ ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಡಿಜಿಟಲ್ ಪ್ರಾಣ ಪತ್ರವನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್:9448857122, 9845402299ನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎನ್.ಮು್ಟೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News