‘ಶೇ...ಎಂಚಿನ ಫೀಲ್ಡಿಂಗ್ ಮಾರ್ರೆ..!’ : ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್‌ನ ಟ್ವೀಟ್‌ನಲ್ಲಿ ತುಳು ಬಳಕೆ

Update: 2020-09-28 14:42 GMT

ಮಂಗಳೂರು, ಸೆ.28: ಶಾರ್ಜಾದಲ್ಲಿ ರವಿವಾರ ರಾತ್ರಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ವೆಸ್ಟಿಂಡೀಸ್‌ನ ಬ್ಯಾಟ್ಸ್‌ಮ್ಯಾನ್, ಪಂಜಾಬ್ ಪರ ಆಟಗಾರ ನಿಕೋಲಸ್ ಪೂರನ್ ಅವರು ಸಿಕ್ಸರ್ ಬಾಲ್‌ನ್ನು ಅರ್ಧದಲ್ಲೇ ತಡೆಗಟ್ಟಿ ಎಲ್ಲರ ಶಹಬ್ಬಾಸ್‌ಗೆ ಒಳಗಾಗಿದ್ದರು. ಈ ಕ್ಷಣವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ತನ್ನ ಟೈಟಲ್‌ನಲ್ಲಿ ತುಳು ಭಾಷೆ ಬಳಸುವ ಮೂಲಕ ವಿಶೇಷ ಗಮನ ಸೆಳೆಯಿತು.

ತನ್ನ ಟ್ವೀಟ್‌ನಲ್ಲಿ ‘ಶೇ...ಎಂಚಿನ ಫೀಲ್ಡಿಂಗ್ ಮಾರ್ರೆ..!’(ಛೇ...ಎಂತಹ ಫೀಲ್ಡಿಂಗ್ ಮಾರಾಯರೇ..!) ಎಂದು ತುಳು ಭಾಷೆಯಲ್ಲಿ ಪ್ರಶಂಸಿಸುವ ಮೂಲಕ ತುಳುವರ ಮನಗೆಲ್ಲುವ ಪ್ರಯತ್ನವನ್ನು ಈ ಚಾನೆಲ್ ನಡೆಸಿತ್ತು. ಇದು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತುಳು ಭಾಷಿಕರ ಮಾತ್ರವಲ್ಲ, ತುಳು ಭಾಷಾಭಿಮಾನಿ ಕನ್ನಡಿಗರ ಮನ ಗೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News