ದಕ್ಷಿಣ ರೈಲ್ವೆಗೆ ಎಜಿಎಂ ಆಗಿ ಕೆ.ಜಿ. ಮಲ್ಯ ಅಧಿಕಾರ ಸ್ವೀಕಾರ

Update: 2020-09-28 16:05 GMT

ಮಂಗಳೂರು, ಸೆ.28: ದಕ್ಷಿಣ ರೈಲ್ವೆ ವಿಭಾಗದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ (ಎಜಿಎಂ) ಕೆ.ಜಿ. ಮಲ್ಯ ಸೋಮವಾರ ಅಧಿಕಾರ ಸ್ವೀಕರಿಸಿದರು.

ಇದೇ ಮಾರ್ಚ್‌ನಲ್ಲಿ ನಿರ್ಗಮಿಸಿದ ಎಜಿಎಂ ಪಿ.ಕೆ. ಮಿಶ್ರಾ ಅವರ ಸ್ಥಾನಕ್ಕೆ ಮಟೀರಿಯಲ್ ವಿಭಾಗದ ಪ್ರಧಾನ ಮುಖ್ಯ ವ್ಯವಸ್ಥಾಪಕ ಕೆ.ಶಣ್ಮುಗರಾಜ್ ಪ್ರಭಾರಿಯಾಗಿದ್ದರು.

ಮಲ್ಯ ಅವರು 1985ರ ಭಾರತೀಯ ರೈಲ್ವೆ ಸೇವೆಯ ವಿದ್ಯುತ್ ಇಂಜಿನಿಯರ್ ಬ್ಯಾಚ್‌ನವರು. ದೆಹಲಿಯ ಪ್ರತಿಷ್ಠಿತ ಐಐಟಿ ಕಾಲೇಜಿನಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ರೈಲ್ವೆ ಸೇವೆಗೆ ಸೇರ್ಪಡೆಗೊಂಡಿದ್ದರು.

ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ 30 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿಯ ಆರಂಭದಿಂದ ದಕ್ಷಿಣ ರೈಲ್ವೆ, ಆಗ್ನೇಯ ಮಧ್ಯ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ, ಪೂರ್ವ ರೈಲ್ವೆ ವಲಯಗಳು ಹಾಗೂ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಹಾಗೂ ಬೆಂಗಳೂರಿನ ಮೆಟ್ರೊ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್‌ನಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅಲ್ಲದೆ, ಗುಂತಕಲ್ ಹಾಗೂ ಬಿಸಲ್‌ಪುರ ವಿಭಾಗಗಳಲ್ಲೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿ ಪ್ರಧಾನ ಇಲೆಕ್ಟ್ರಿಕಲ್ ಲೋಕೊ ಇಂಜಿನಿಯರ್‌ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ರೈಲ್ವೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News