ಪೋಸ್ಟ್ ಕಾರ್ಡ್‌ನಲ್ಲಿ ‘ತುಳು ಕಬಿತೆ ಪಂಥ’ಕ್ಕೆ ಆಹ್ವಾನ

Update: 2020-09-28 16:21 GMT

ಮಂಗಳೂರು, ಸೆ.28: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಕಿನ್ನಿಗೋಳಿಯ ಯುಗಪುರುಷ ಮತ್ತು ರೋಟರಿ ಕ್ಲಬ್ ಕಿನ್ನಿಗೋಳಿಯ ಸಹಕಾರದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಪೋಸ್ಟ್ ಕಾರ್ಡ್‌ನಲ್ಲಿ ‘ತುಳು ಕಬಿತೆ ಪಂಥ-2020’ನ್ನು ಆಯೋಜಿಸಿದೆ.

ಎಲ್ಲೂ ಪ್ರಕಟಗೊಳ್ಳದ, ಸ್ವ ರಚಿತ ಕವನವನ್ನು ಪೋಸ್ಟ್ ಕಾರ್ಡ್‌ನಲ್ಲಿಯೇ ಬರೆದು ಅಕ್ಟೋಬರ್ 10ರೊಳಗೆ ಕಳುಹಿಸಬೇಕು. ಆಯ್ದ ಉತ್ತಮ ಕವನಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನದೊಂದಿಗೆ 10 ಮಂದಿಗೆ ಪ್ರೋತ್ಸಾಹಕ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಒಬ್ಬರು ಒಂದು ಕವನ ಮಾತ್ರ ಬರೆದು ಕಳುಹಿಸಬಹುದು. ಆಯ್ಕೆಗೊಂಡ ಕವನಗಳನ್ನು ತುಳು ಸಾಹಿತ್ಯ ಅಕಾಡಮಿಯ ಮದಿಪು ತ್ರೈಮಾಸಿಕ ಹಾಗೂ ಕಿನ್ನಿಗೋಳಿಯ ಯುಗಪುರುಷಿ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ಕವನವನ್ನು ‘ತುಳು ಕಬಿತೆ ಪಂಥ-2020, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ತುಳು ಭವನ, ಅಶೋಕ ನಗರ ಅಂಚೆ, ಮಂಗಳೂರು- 575006. ಈ ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗೆ ಅಕಾಡಮಿಯ ಸದಸ್ಯ ಕಾರ್ಯಕ್ರಮ ಸಂಚಾಲಕ ನರೇಂದ್ರ ಕೆರೆಕಾಡು (9663393374) ಅವರನ್ನು ಸಂಪರ್ಕಿಸಬಹುದು ಎಂದು ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News