ಸೆ. 30: ಬ್ಯಾರಿ ಲಿಪಿ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿವಿಡಿ ಬಿಡುಗಡೆ

Update: 2020-09-28 16:22 GMT

ಮಂಗಳೂರು, ಸೆ.28: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಸೆ.30ರ ಪೂ.11:30ಕ್ಕೆ ಬ್ಯಾರಿ ಲಿಪಿ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿವಿಡಿ ಬಿಡುಗಡೆ ಕಾರ್ಯಕ್ರಮವು ಅಕಾಡಮಿಯ ಕಚೇರಿಯಲ್ಲಿ ನಡೆಯಲಿದೆ.

ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬ್ಯಾರಿ ಲಿಪಿ ಕಲಿಕಾ ವಿಧಾನದ ಗ್ರಾಫಿಕ್ಸೃ್ ಡಿವಿಡಿಯನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸುವರು. ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ‘ಬ್ಯಾರಿ ಲಿಪಿ ಸಾಮಾಜಿಕ ಜಾಲತಾಣದಲ್ಲಿ ಬಳಸಲು ಚಾಲನೆ ನೀಡಲಿರುವರು.

ಈ ಸಂದರ್ಭ ಬ್ಯಾರಿ ಲಿಪಿ ಗ್ರಾಫಿಕ್ ಡಿಸೈನರ್ ಸಚಿನ್ ಷಾ, ಬ್ಯಾರಿ ಲಿಪಿ ರಚನೆ/ಪರಿಶೀಲನೆ/ಸಂಶೋಧನಾ ಸಮಿತಿಯ ಸದಸ್ಯರಾದ ಡಾ. ಅಬ್ದುಲ್ ರಶೀದ್ ಝೈನಿ ಸಖಾಫಿ ಕಾಮಿಲ್, ಎ.ಕೆ. ಕುಕ್ಕಿಲ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಅಬ್ದುಲ್ ರಝಾಕ್ ಅನಂತಾಡಿ, ಹೈದರ್ ಅಲಿ, ಡಾ.ಅಬೂಬಕ್ಕರ್ ಸಿದ್ದೀಕ್, ಹಂಝ ಮಲಾರ್, ಡಾ. ಮುಹಮ್ಮದ್ ಫೌಸೀದ್, ಅಬ್ದುಲ್ ಸಮದ್ ಬಾವಾ ಪುತ್ತೂರು ಉಪಸ್ಥಿತರಿರುವರು ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News