ಬೇಕಲ್ ಉಸ್ತಾದ್ ದೂರದೃಷ್ಟಿಯುಳ್ಳ ಮುತ್ಸದ್ಧಿಯೂ ಆಗಿದ್ದರು : ಫಾರೂಕ್ ಉಳ್ಳಾಲ್

Update: 2020-09-28 16:55 GMT

ಉಳ್ಳಾಲ : ಶೈಖುನಾ ಬೇಕಲ್ ಉಸ್ತಾದ್ ಮತ್ತು ಉಳ್ಳಾಲದ ಮುಸ್ಲಿಮರ ನಡುವೆ ಅವಿನಾಭಾವ ಸಂಬಂಧವಿತ್ತು. ಧಾರ್ಮಿಕ  ಕ್ಷೇತ್ರಕ್ಕೆ ಸಂಬಂಧಿಸಿ, ಸಮಸ್ಯೆ-ಜಿಜ್ಞಾಸೆಗಳು ಉಂಟಾದಾಗಲೆಲ್ಲಾ ಅವರೊಬ್ಬ ಸಮನ್ವಯಗಾರರಂತೆ  ಮಾರ್ಗದರ್ಶನ ನೀಡುತ್ತಿದ್ದರು. ಸರಳ ವ್ಯಕ್ತಿತ್ವದ ಬೇಕಲ್ ಉಸ್ತಾದ್ ಪ್ರಖರ ವಿದ್ವಾಂಸರು ಮಾತ್ರವಲ್ಲ ದೂರದೃಷ್ಠಿಯುಳ್ಳ  ಮುತ್ಸದ್ಧಿಯೂ ಆಗಿದ್ದರು ಎಂದು  ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಮೇಲಂಗಡಿ ಮುಹಿಯ್ಯುದ್ದೀನ್ ಜುಮಾ (ಹೊಸಪಳ್ಳಿ)  ಮಸೀದಿಯ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಹೇಳಿದರು.

ಅವರು ಮೇಲಂಗಡಿ ಹೊಸ ಪಳ್ಳಿಯ ಆಡಳಿತ ಸಮಿತಿ ವತಿಯಿಂದ ಸೋಮವಾರ ಹೊಸ ಪಳ್ಳಿಯಲ್ಲಿ ನಡೆದ ಇತ್ತೀಚೆಗೆ ಅಗಲಿದ  ಉಡುಪಿ ಜಿಲ್ಲಾ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮತ್ತು  ಹೊಸಪಳ್ಳಿಯ ಮಾಜಿ ಅಧ್ಯಕ್ಷ  ಕುಂಞಿಬಾವ ಹಾಜಿಯವರ ಸ್ಮರಣಾರ್ಥ ನಡೆದ  ಝಿಕ್ರ್  ತಹ್ಲೀಲ್ ಸಮರ್ಪಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೊಸಪಳ್ಳಿಯ ಅಧ್ಯಕ್ಷ ಮಾಜಿ ಕೌನ್ಸಿಲರ್ ಮುಸ್ತಫ ಅಬ್ದುಲ್ಲಾ ರವರು 'ಬೇಕಲ ಉಸ್ತಾದರ  ಅಗಲಿಕೆಯಿಂದಾದ ನಷ್ಟವನ್ನು ತುಂಬುವುದು ಸುಲಭದ ಕಾರ್ಯವಲ್ಲ, ಅವರೊಬ್ಬ ಅರಿವಿನ ಗಣಿಯಂತಿದ್ದರು ಎಂದು ಹೇಳಿದರು.

ತಹ್ಲೀಲ್ ಸಮರ್ಪಣಾ ಕಾರ್ಯಕ್ರಮವನ್ನು ಹೊಸಪಳ್ಳಿಯ  ಇಮಾಮರಾದ  ಅಶ್ರಫ್ ಫೈಝಿ ಮಲಾರ್ ನಡೆಸಿ ಕೊಟ್ಟರು. ಹಿರಿಯ ಸಾಮಾಜಿಕ ಮುಂದಾಳು ಹಾಜಿ ಬಾವ ಅಹ್ಮದ್, ಉಳ್ಳಾಲ ದರ್ಗಾ ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಜೊತೆ ಕಾರ್ಯದರ್ಶಿ ಅಝಾದ್ ಇಸ್ಮಾಯಿಲ್, ಹೊಸಪಳ್ಳಿಯ ಕೋಶಾಧಿಕಾರಿ ರಶೀದ್ ಮುಹಮ್ಮದ್, ಕಂಝೂಲ್ ಉಲೂಮ್ ಮದ್ರಸದ  ಸದರ್ ಮುಅಲ್ಲಿಮ್ ಅಶ್ರಫ್ ಮುಸ್ಲಿಯಾರ್ ಹರೇಕಳ, ಮುಅಲ್ಲಿಮರುಗಳಾದ ಮುಹ್ಝಿನ್  ಸಿದ್ದೀಕ್ ಝುಹರಿ, ಸಲಾಂ ಮದನಿ, ಮುಹಿಯ್ಯುದ್ದೀನ್ ಮುಸ್ಲಿಯಾರ್, ಮುಂತಾದವರು ಉಪಸ್ಥಿತರಿದ್ದರು.

ಹೊಸಪಳ್ಳಿ ಆಡಳಿತ ಸಮಿತಿಯ ಅಬ್ದುಲ್ ರಹಿಮಾನ್ ಅದ್ದಾಮ  ಸ್ವಾಗತಿಸಿ, ಮಾಲಿಕ್ ಮೇಲಂಗಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News