ಕಿಶನ್ -ಪೊಲಾರ್ಡ್ ಹೋರಾಟ ವ್ಯರ್ಥ: ಮುಂಬೈ ವಿರುದ್ಧ 'ಸೂಪರ್' ಜಯ ಗಳಿಸಿದ ಆರ್​ಸಿಬಿ

Update: 2020-09-28 18:23 GMT

ದುಬೈ, ಸೆ.28: ಈ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಇಶನ್‌ ಕಿಶನ್ ಹಾಗೂ ಕೊನೆಯಲ್ಲಿ ಕಿರನ್ ಪೊಲಾರ್ಡ್ ಪ್ರದರ್ಶಿಸಿದ ಭರ್ಜರಿ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟೈ ಸಾಧಿಸಿದರೂ, ಕೊನೆಯಲ್ಲಿ ಸೂಪರ್ ಓವರ್ ನಲ್ಲಿ ಆರ್​ಸಿಬಿ ಜಯ ಗಳಿಸಿದೆ. ಈ ಮೂಲಕ ಬೆಂಗಳೂರು ತಂಡವು ತಾನಾಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ.

ಗೆಲುವಿಗೆ 202 ರನ್ ಗಳ ಗುರಿ ಪಡೆದಿದ್ದ ಮುಂಬೈ ಇಂಡಿಯನ್ಸ್ ತಂಡವು ಇಶನ್‌ ಕಿಶನ್ ಹಾಗೂ ಕಿರನ್ ಪೊಲಾರ್ಡ್ ಭರ್ಜರಿ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ಗಳಿಸಿ ಟೈ ಮಾಡಿಕೊಂಡಿತು. ಬಳಿಕ ನಡೆದ ಸೂಪರ್ ಓವರ್ ನಲ್ಲಿ ಮುಂಬೈ 7 ರನ್ ಗಳಿಸಿದರೆ, ಆರ್​ಸಿಬಿ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿತು.

ಮುಂಬೈ ಪರ ಇಶನ್‌ ಕಿಶನ್ 58 ಎಸೆತಗಳಲ್ಲಿ 99 ರನ್ ಹಾಗೂ ಕಿರನ್ ಪೊಲಾರ್ಡ್ 24 ಎಸೆತಗಳಲ್ಲಿ 60 ರನ್ ಸಿಡಿಸಿದರು. ಆರ್​ಸಿಬಿ ಪರ ಇಸುರು ಉದಾನ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ ದೇವದತ್ ಪಡಿಕ್ಕಲ್, ಆ್ಯರನ್ ಫಿಂಚ್ ಮತ್ತು ಎಬಿಡಿ ವಿಲಿಯರ್ಸ್ ಅರ್ಧಶತಕ ಹಾಗೂ ಶಿವಬ್ ದುಬೆ ಬಾರಿಸಿದ 27 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News