ತಲಪಾಡಿಯಲ್ಲಿ ಕೋವಿಡ್19 ಪರೀಕ್ಷೆ

Update: 2020-09-29 11:49 GMT

ಉಳ್ಳಾಲ : ದ.ಕ. ಜಿಲ್ಲಾಡಳಿತ ಆದೇಶ ಮೇರೆಗೆ ಗ್ರಾಮಸ್ಥರ ಕೋವಿಡ್19 ರ್ಯಾಪಿಡ್ ಪರೀಕ್ಷೆಯು ತಲಪಾಡಿ ಗ್ರಾಮ ಪಂ. ವತಿಯಿಂದ  ತಲಪಾಡಿ ಗ್ರಾಮದ ಕೆಸಿರೋಡ್ ಬಳಿ ಇರುವ ಗ್ರಾಮ ಸೌಧದಲ್ಲಿ ಮಂಗಳವಾರ ನಡೆಯಿತು.

ತಲಪಾಡಿ ಗ್ರಾಮ ವ್ಯಾಪ್ತಿಯ ಕೆಲವು ಗ್ರಾಮಸ್ಥರು ಕೋವಿಡ್ ಪರೀಕ್ಷೆ ಮಾಡಿಸಿ ಇದರ ಸದುಪಯೋಗ ಪಡೆದುಕೊಂಡರು.  ತಾ.ಪಂ.ಸದಸ್ಯ ಸಿದ್ದೀಕ್ ತಲಪಾಡಿ, ತಲಪಾಡಿ ಗ್ರಾ.ಪಂ.ಪಿಡಿಒ ಕೇಶವ ಪೂಜಾರಿ, ಕೋಟೆಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ದ ಮೇಡಿಕಲ್ ಲ್ಯಾಬ್ ಟೆಕ್ನಿಷಿಯನ್ ನಿಕಿತಾ, ಡಾಟಾ ಎಂಟ್ರಿ ಆಪರೇಟರ್ ಸ್ವಾತಿ, ಆಶಾ ಕಾರ್ಯಕರ್ತೆಯರಾದ ಮಮತಾ ಶೆಟ್ಟಿ, ಶಾಂತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News