ಜೊಯಾಲುಕ್ಕಾಸ್ ಕಾಫಿಟೇಬಲ್ ಬುಕ್ 'ಎ ಗ್ಲಿಟರಿಂಗ್ ಸ್ಟೋರಿ' ಬಿಡುಗಡೆ

Update: 2020-09-29 12:18 GMT

ದುಬೈ (ಯುಎಇ), ಸೆ. 29: ದೇಶವಿದೇಶಗಳಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಸರಣಿ ಶೋರೂಮ್‌ಗಳನ್ನು ಹೊಂದಿರುವ ಪ್ರತಿಷ್ಠಿತ ಜೊಯಾಲುಕ್ಕಾಸ್ ಗ್ರೂಪ್ ಇತ್ತೀಚಿಗೆ ಕಾಫಿಟೇಬಲ್ ಬುಕ್ 'ಎ ಗ್ಲಿಟರಿಂಗ್ ಸ್ಟೋರಿ'ಯನ್ನು ಹೊರತಂದಿದೆ.

ದುಬೈನ ಭಾರತೀಯ ದೂತಾವಾಸದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಡಾ.ಅಮನ್ ಪುರಿ ಅವರು ಜೊಯಾಲುಕ್ಕಾಸ್ ಗ್ರೂಪ್‌ನ ಇತಿಹಾಸವನ್ನು ಹೇಳುವ ಈ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ಜೊಯಾಲುಕ್ಕಾಸ್ ಗ್ರೂಪ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಜಾಯ್ ಆಲುಕ್ಕಾಸ್ ಅವರು ಕಿರುಹೊತ್ತಿಗೆಯ ಪ್ರಥಮ ಪ್ರತಿಯನ್ನು ಪುರಿ ಅವರಿಗೆ ನೀಡಿದರು. ಕಿರುಹೊತ್ತಿಗೆಯು ಗ್ರೂಪ್‌ನ ಸ್ಥಾಪಕ ಹಾಗೂ ಜಾಯ್ ಆಲುಕ್ಕಾಸ್ ಅವರ ಯಶಸ್ಸಿಗೆ ಸ್ಫೂರ್ತಿಯಾಗಿರುವ ಅವರ ತಂದೆ ದಿ. ಆಲುಕ್ಕಾ ಜೋಸೆಫ್ ವರ್ಗೀಸ್ ಅವರಿಗೆ ಶ್ರದ್ಧಾಂಜಲಿಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಾಯ್ ಆಲುಕ್ಕಾಸ್ ಅವರು,‘ಜೊಯಾಲುಕ್ಕಾಸ್ ಬ್ರಾಂಡ್‌ನ ಸ್ಥಾಪನೆಯ ನಂತರದ ಎಲ್ಲ ಸ್ಮರಣೀಯ ಘಳಿಗೆಗಳ ವಿವರಗಳನ್ನೊಂಡಿರುವ ಈ ಕಾಫಿ ಟೇಬಲ್ ಬುಕ್‌ನ ಮೂಲಕ ನಾವು ನಮ್ಮ ಪಯಣ ಮತ್ತು ಯಶಸ್ಸಿನ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಕೊಲ್ಲಿ ಪ್ರದೇಶದಲ್ಲಿ ನಮ್ಮ ಪಯಣವು 1987ರಲ್ಲಿ ದುಬೈನಲ್ಲಿ ಚಿನ್ನಾಭರಣಗಳ ಮಳಿಗೆಯೊಂದನ್ನು ಸ್ಥಾಪಿಸುವ ಮೂಲಕ ಆರಂಭಗೊಂಡಿತ್ತು. ನಾವು ಇಂದು ವಿಶ್ವಾದ್ಯಂತ 11 ದೇಶಗಳಲ್ಲಿ ಹರಡಿಕೊಂಡಿರುವ ಅಂತರರಾಷ್ಟ್ರೀಯ ಬ್ರಾಂಡ್ ಆಗಿ ಬೆಳೆದಿದ್ದೇವೆ. ಈವರೆಗಿನ ನಮ್ಮ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಆದರೆ ಇದೇ ವೇಳೆ ಇವೆಲ್ಲ ಆಭರಣ ಲೋಕದ ಕುರಿತು ನಮ್ಮ ವಿಶಾಲ ದೃಷ್ಟಿಯ ಭಾಗವಾಗಿವೆ ಎನ್ನುವುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಸಾಧನೆಗಳನ್ನು ಈ ಕಿರುಹೊತ್ತಿಗೆ ಯಲ್ಲಿ ದಾಖಲಿಸಿರುವುದು ನಮ್ಮಲ್ಲಿ ಇನ್ನಷ್ಟು ಉತ್ಸಾಹವನ್ನು ತುಂಬಿದೆ ಮತ್ತು ಹೊಸ ಹುರುಪು ಹಾಗೂ ವಿಶ್ವಾಸದಿಂದ ನಮ್ಮ ಕನಸುಗಳನ್ನು ಬೆಂಬತ್ತುವ ನಮ್ಮ ಸಂಕಲ್ಪವನ್ನು ಇನ್ನಷ್ಟು ಬಲಗೊಳಿಸಿದೆ. ಜೊಯಾಲುಕ್ಕಾಸ್ ಇಂದು ವಿಶ್ವಾದ್ಯಂತ 20 ಲಕ್ಷಕ್ಕೂ ಅಧಿಕ ಜನರ ಹೃದಯಕ್ಕೆ ಆಪ್ತವಾದ ಬ್ರಾಂಡ್ ಆಗಿದೆ. ಭಾರತ, ಜಿಸಿಸಿ, ಯುಎಸ್‌ಎ, ಯುಕೆ, ಸಿಂಗಾಪುರ ಮತ್ತು ಮಲೇಶಿಯಾಗಳಲ್ಲಿ ನಮ್ಮ ಶೋರೂಮ್‌ಗಳು ಹರಡಿಕೊಂಡಿದ್ದು, ವಿಶ್ವಾಸ, ಮೌಲ್ಯ ಮತ್ತು ಪರಂಪರೆ ನಮಗೆ ಹೆಸರನ್ನು ತಂದಿವೆ ’ ಎಂದು ಹೇಳಿದರು.

ಜೊಯಾಲುಕ್ಕಾಸ್ ಗ್ರೂಪ್‌ನ ಕಾರ್ಯಕಾರಿ ನಿರ್ದೇಶಕ ಜಾನ್ ಪಾಲ್ ಆಲುಕ್ಕಾಸ್, ಜಾಸಿಂ ಮುಹಮ್ಮದ್ ಇಬ್ರಾಹೀಂ ಅಲ್ ಹಸವಿ ಅಲ್‌ತಾಮಿಮಿ ಮತ್ತು ಮುಸ್ತಫಾ ಮುಹಮ್ಮದ್ ಅಹ್ಮದ್ ಅಲ್ ಶರೀಫ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News