ಉಡುಪಿ: ಹ್ಯುಂಡೈ ಮೋಟರ್ಸ್‌ನಿಂದ ಪ್ರವಾಹ ಬಾಧಿತ ಗ್ರಾಹಕರ ನೆರವಿಗೆ ಕಾರ್ಯಪಡೆ ರಚನೆ

Update: 2020-09-29 12:52 GMT

ಉಡುಪಿ, ಸೆ.29: ಇತ್ತೀಚೆಗೆ ಉಡುಪಿಯಲ್ಲಿ ಕಾಣಿಸಿಕೊಂಡ ಭೀಕರವಾದ ಜಲಪ್ರಳಯದಲ್ಲಿ ತೊಂದರೆಗೊಳಗಾದ ಹ್ಯುಂಡೈ ಮೋಟಾರ್ಸ್‌ನ ಗ್ರಾಹಕರಿಗೆ ಎಲ್ಲಾ ರೀತಿ ಸಹಾಯ ಮಾಡಲು ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಉಡುಪಿಯಲ್ಲಿ ಹ್ಯುಂಡೈ ರಿಲೀಫ್ ಟಾಸ್ಕ್ ಫೋರ್ಸ್ (ಹ್ಯುಂಡೈ ಪರಿಹಾರ ಕಾರ್ಯಪಡೆ) ಅನ್ನು ರಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹ್ಯುಂಡೈ ಮೋಟಾರ್ಸ್‌ನ ಸೇಲ್ಸ್, ಮಾರ್ಕೆಟಿಂಗ್ ಮತ್ತು ಸರ್ವಿಸ್‌ನ ನಿರ್ದೇಶಕ ತರುಣ್ ಗರ್ಗ್, ನಮ್ಮ ಜಾಗತಿಕ ವ್ಯವಹಾರ ಸಿದ್ಧಾಂತ ಮತ್ತು ಅದನ್ನೂ ಮೀರಿದ ಜೀವಿತಾವಧಿಯ ಪಾಲುದಾರ ರೊಂದಿಗೆ ಜತೆಯಾಗಿರುವ ಸಿದ್ಧಾಂತದಿಂದ ಸ್ಫೂರ್ತಿ ಪಡೆದು, ಹ್ಯುಂಡೈ ಯಾವಾಗಲೂ ತನ್ನ ಗ್ರಾಹಕರ ವಾಹನ ಮಾಲಕತ್ವದ ಪ್ರಯಾಣಕ್ಕೆ ಬದ್ಧವಾಗಿದೆ. ಈ ಪ್ರತಿಕೂಲ ಸಮಯದಲ್ಲಿ ನಾವು ಉಡುಪಿಯಲ್ಲಿ ಪ್ರವಾಹ ಪೀಡಿತ ಗ್ರಾಹಕರಿಗೆ ನಮ್ಮ ಸೇವಾ ಬೆಂಬಲವನ್ನು ನೀಡುತಿದ್ದೇವೆ ಎಂದಿದ್ದಾರೆ.

ಇತ್ತೀಚಿನ ವಿನಾಶಕಾರಿ ಪ್ರವಾಹದ ನಂತರ ಅವರು ತಮ್ಮ ಜೀವನವನ್ನು ಪುನರ್ನಿರ್ಮಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಕೊಡುಗೆ, ಉಡುಪಿಯ ಜನರೊಂದಿಗೆ ಹ್ಯುಂಡೈ ತನ್ನ ಬೆಂಬಲವನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ. ನಮ್ಮ ಪರಿಹಾರ ತಂಡಗಳು ಗ್ರಾಹಕರ ಯಾವುದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ತಮ್ಮ ಬೆಂಬಲವನ್ನು ಮುಂದುವರಿಸುತ್ತವೆ ಎಂದೂ ತರುಣ್ ತಿಳಿಸಿದ್ದಾರೆ.

ತಡೆರಹಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು, ಹ್ಯುಂಡೈ ಗ್ರಾಹಕರಿಗೆ ನೆರವು ನೀಡಲು ಮೀಸಲಾದ ತುರ್ತು ರಸ್ತೆಬದಿಯ ಸಹಾಯ ಸೇವಾ ತಂಡವನ್ನು ನಿಯೋಜಿಸಿದೆ. ಹೆಚ್ಚುವರಿಯಾಗಿ ಪ್ರವಾಹ ಪೀಡಿತ ವಾಹನಗಳಿಗೆ ವಿಮೆ ಹಕ್ಕುಗಳ ಸವಕಳಿ ಮೊತ್ತದ ಮೇಲೆ ಶೇ.50 ರಿಯಾಯಿತಿಯನ್ನು ಎಚ್ಎಂಐಎಲ್ ನೀಡುತ್ತಿದೆ. ಹೆಚ್ಚಿನ ಯಾವುದೇ ಮಾಹಿತಿಗಳಿಗಾಗಿ ಹ್ಯುಂಡೈ ಗ್ರಾಹಕ ಸಹಾಯವಾಣಿ ಕೇಂದ್ರದ ಸಂಖ್ಯೆ 18001024645 ಆಗಿದೆ.

ಉಡುಪಿಯಲ್ಲಿ ಹ್ಯುಂಡೈ ಗ್ರಾಹಕರಿಗೆ ಸಹಾಯ ಮಾಡಲು ವಿಶೇಷ ಕಾರ್ಯಪಡೆ

ಪ್ರವಾಹ ಪೀಡಿತ ವಾಹನಗಳಿಗೆ ಉಚಿತವಾಗಿ ರಸ್ತೆ ಬದಿ ಸಹಾಯ

ಪ್ರವಾಹ ಪೀಡಿತ ವಾಹನಗಳ ವಿಮಾ ಹಕ್ಕುಗಳ ಮೇಲಿನ ಸವಕಳಿ ಮೊ್ತದ ಮೇಲೆ ಶೇ.50ರಷ್ಟು ರಿಯಾಯಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News