ಉಡುಪಿ: 319 ಮಂದಿಗೆ ಕೊರೋನ ಪಾಸಿಟಿವ್, ಇಬ್ಬರು ಮೃತ್ಯು

Update: 2020-09-29 16:03 GMT

ಉಡುಪಿ, ಸೆ. 29: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಎಂಟನೇ ದಿನವನ್ನು ಪೂರ್ಣಗೊಳಿಸಿರುವಂತೆ ಇಂದು ಉಡುಪಿ ಜಿಲ್ಲೆಯಲ್ಲಿ ಒಟ್ಟು 319 ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ರಾಜ್ಯ ಆರೋಗ್ಯ ಇಲಾಖೆ ಇಂದು ಸಂಜೆ ಪ್ರಕಟಿಸಿದ ಕೋವಿಡ್ ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 319 ಪಾಸಿಟಿವ್ ಪ್ರಕರಣಗಳಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ದೃಢಪಟ್ಟವರ ಸಂಖ್ಯೆ 17 ಸಾವಿರ ದಾಟಿದ್ದು, ಒಟ್ಟು 17,005ಕ್ಕೇರಿದೆ. ಅಲ್ಲದೇ ದಿನದಲ್ಲಿ 69 ಮಂದಿ ಸೋಂಕಿ ನಿಂದ ಗುಣಮುಖರಾಗಿ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದು, ಈವರೆಗೆ ಬಿಡುಗಡೆ ಗೊಂಡವರ ಒಟ್ಟು ಸಂಖ್ಯೆ 14,781ಕ್ಕೇರಿದೆ ಎಂದು ಅದು ತಿಳಿಸಿದೆ.

ಅಲ್ಲದೇ ಜಿಲ್ಲೆಯಲ್ಲಿ ಇಂದಿಗೆ ಒಟ್ಟು 2078 ಸಕ್ರೀಯ ಕೋವಿಡ್ ಪ್ರಕರಣ ಗಳಿವೆ. ಮಂಗಳವಾರ ಕೋವಿಡ್‌ಗೆ ಒಟ್ಟು ಇಬ್ಬರು ಬಲಿಯಾಗಿದ್ದು, ಇದರಿಂದ ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ವುೃತಪಟ್ಟವರ ಸಂಖ್ಯೆ 146ಕ್ಕೇರಿದೆ. ಅಲ್ಲದೇ ಜಿಲ್ಲೆಯಲ್ಲಿ ಇಂದಿಗೆ ಒಟ್ಟು 2078 ಸಕ್ರೀಯ ಕೋವಿಡ್ ಪ್ರಕರಣ ಗಳಿವೆ.

ಮಂಗಳವಾರ ಕೋವಿಡ್‌ಗೆ ಒಟ್ಟು ಇಬ್ಬರು ಬಲಿಯಾಗಿದ್ದು, ಇದರಿಂದ ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 146ಕ್ಕೇರಿದೆ. ಉಡುಪಿಯ 71 ಮತ್ತು 81 ವರ್ಷ ಪ್ರಾಯದ ಇಬ್ಬರು ಹಿರಿಯ ನಾಗರಿಕರು ಅನ್ಯ ಸಮಸ್ಯೆಗಳೊಂದಿಗೆ ಕೋವಿಡ್ ಪಾಸಿಟಿವ್ ಬಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಜ್ವರ, ಕೆಮ್ಮು ಹಾಗೂ ಉಸಿರಾಟ ಸಮಸ್ಯೆ ಇದ್ದ 71 ವರ್ಷದ ವೃದ್ಧರು 24ಕ್ಕೆ ಚಿಕಿತ್ಸೆಗೆ ದಾಖಲಾಗಿ 27ಕ್ಕೆ ಮೃತಪಟ್ಟರೆ, 81 ವರ್ಷ ಪ್ರಾಯದ ವೃದ್ಧರು 13ರಂದು ವಿವಿಧ ಸಮಸ್ಯೆಗಳಿಗಾಗಿ ಸೆ.13ಕ್ಕೆ ಆಸ್ಪತ್ರೆಗೆ ದಾಖಲಾಗಿ ಸೆ.24ರಂದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News