​ಉಡುಪಿ-ಹೈದರಾಬಾದ್: ಅ.1ರಿಂದ ಸಾರಿಗೆ ಸೌಲಭ್ಯ

Update: 2020-09-29 16:51 GMT

ಉಡುಪಿ, ಸೆ. 29: ಮಂಗಳೂರು ವಿಭಾಗದ ಮಂಗಳೂರು ಬಸ್‌ನಿಲ್ದಾಣ ದಿಂದ ಹೈದರಾಬಾದ್‌ಗೆ ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು ಮಾರ್ಗವಾಗಿ ಹಾಗೂ ಹೈದರಾಬಾದ್‌ನಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಅಂಬಾರಿ ಡ್ರೀಮ್‌ಕ್ಲಾಸ್ ಮಲ್ಟಿಅಕ್ಸ್‌ಲ್ ಎ.ಸಿ. ಸ್ಲೀಪರ್ ಬಸ್ ವ್ಯವಸ್ಥೆಯ್ನು ಅ.1ರಿಂದ ಪ್ರಾರಂಭಿಸಲಾಗುತ್ತಿದೆ.

ಅದೇ ರೀತಿ ಉಡುಪಿ ಬಸ್ ನಿಲ್ದಾಣದಿಂದ ಉಡುಪಿ- ಹೈದರಾಬಾದ್ ನಡುವೆ ರಾಜಹಂಸ ಬಸ್‌ನ್ನು ಮಣಿಪಾಲ- ಕುಂದಾಪುರ- ಸಿದ್ಧಾಪುರ- ತೀರ್ಥಹಳ್ಳಿ- ಶಿವಮೊಗ್ಗ- ಹರಿಹರ- ಹರಪನಹಳ್ಳಿ- ಹೊಸಪೇಟೆ- ಗಂಗಾವತಿ- ಮಾನ್ವಿ- ರಾಯಚೂರು ಮಾರ್ಗಲ್ಲಿ ಅ.1ರಿಂದ ಪ್ರಾರಂಭಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದ ನಿಗಮದ ಎಸ್‌ಒಪಿಯ ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು. ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಈ ಸಾರಿಗೆಯ ಸದುಪಯೋಗ ಪಡೆದುಕೊಳ್ಳುವಂತೆ ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾ ಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News