ಶಾಲಾ-ಕಾಲೇಜುಗಳಿಗೆ ಅಕ್ಟೋಬರ್ 15 ರಿಂದ ಪುನರಾರಂಭಕ್ಕೆ ಅವಕಾಶ ನೀಡಿದ ಕೇಂದ್ರ ಸರಕಾರ

Update: 2020-09-30 15:47 GMT

ಹೊಸದಿಲ್ಲಿ: ದೇಶಾದ್ಯಂತ ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಮುಚ್ಚಲ್ಪಟ್ಟಿರುವ  ಶಾಲಾ ಹಾಗೂ ಕಾಲೇಜುಗಳನ್ನು ಅಕ್ಟೋಬರ್ 15ರಿಂದ ಪುನರಾರಂಭಿಸಲು ಕೇಂದ್ರ ಸರಕಾರವು ಇಂದು ಅವಕಾಶ ನೀಡಿದ್ದು, ಆದರೆ ಆಯಾ ರಾಜ್ಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಪರಿಸ್ಥಿತಿಯನ್ನು ಗಮನಿಸಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಆದಾಗ್ಯೂ ಆನ್ ಲೈನ್ ಹಾಗೂ ದೂರ ಶಿಕ್ಷಣವು ಆದ್ಯತೆಯ ಬೋಧನಾ ವಿಧಾನವಾಗಿ ಮುಂದುವರಿಯುತ್ತದೆ ಹಾಗೂ ಪ್ರೋತ್ಸಾಹಿಸಲ್ಪಡುತ್ತದೆ ಎಂದು ಕೇಂದ್ರ ತಿಳಿಸಿದೆ.

ಈ ಮೂಲಕ ಕೊರೋನವೈರಸ್ ಗೆ ಸಂಬಂಧಿಸಿದ ನಿರ್ಬಂಧವನ್ನುತೆಗೆದುಹಾಕುವ ಕುರಿತು ಮುಂದಿನ ಹೆಜ್ಜೆಗಳನ್ನುಇಟ್ಟಿದೆ. .  ಐದನೇ ಹಂತದ ಲಾಕ್ ಡೌನ್ ಗೆ ಕೇಂದ್ರ ಗೃಹ ಸಚಿವಾಲಯ ಮಾರ್ಗ ಸೂಚಿಯನ್ನು ಬಿಡುಗಡೆಗೊಳಿಸಿದೆ.

ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಎಕ್ಸಿಬಿಶನ್ ಹಾಲ್ ಗಳು ಹಾಗೂ ಮನರಂಜನಾ ಉದ್ಯಾನವನಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು. ಆದರೆ ಸಂಖ್ಯೆಗಳ ಮೇಲೆ ನಿರ್ಬಂಧ ಇದೆ. ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಶೇ.50ರಷ್ಟು ಆಸನ ಸಾಮರ್ಥ್ಯ ದೊಂದಿಗೆ ಕಾರ್ಯಾಚರಿಸಬಹುದು. ಇದಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು  ಎಂದು  ಕೇಂದ್ರ ತಿಳಿಸಿದೆ.

50 ಶೇ. ಪ್ರೇಕ್ಷಕರೊಂದಿಗೆ ಸಿನೆಮ ಮಂದಿರ ತೆರೆಯಲು ಅನುಮತಿ

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಲಾಗಿದ್ದು, 5ನೇ ಹಂತದ ನಿರ್ಬಂಧ ಸಡಿಲಿಕೆಯಲ್ಲಿ ಕೆಲವು ಷರತ್ತುಗಳಿಗೆ ಒಳಪಟ್ಟು ಅಕ್ಟೋಬರ್ 15ರಿಂದ 50 ಶೇ.ದಷ್ಟು ಪ್ರೇಕ್ಷಕರೊಂದಿಗೆ ಸಿನೆಮಾ ಮಂದಿರಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದೆ. ಆದರೆ ಕಂಟೈನ್‌ಮೆಂಟ್ ವಲಯಗಳಲ್ಲಿ ಅಕ್ಟೋಬರ್ 31ರವರೆಗೆ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಸರಕಾರ ತಿಳಿಸಿದೆ.

ಶಾಲೆ ಮತ್ತು ಕಾಲೇಜುಗಳನ್ನು ಅಕ್ಟೋಬರ್ 15ರಿಂದ ಆರಂಭಿಸಬಹುದು. ಈ ಮಧ್ಯೆ, ಆನ್‌ಲೈನ್ ಕೋಚಿಂಗ್ ಮತ್ತು ದೂರಶಿಕ್ಷಣ ಪ್ರಕ್ರಿಯೆ ಈ ಹಿಂದಿನಂತೆಯೇ ಆದ್ಯತೆಯ ಕಲಿಕಾ ಕ್ರಮವಾಗಿ ಮುಂದುವರಿಯಬೇಕು ಮತ್ತು ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ. ಇವುಗಳು ಮತ್ತೆ ಆರಂಭವಾಗಲಿವೆ:

 ಸಿನೆಮ ಮಂದಿರ, ಮಲ್ಟಿಪ್ಲೆಕ್ಸ್‌ಗಳು, ಪ್ರದರ್ಶನ ಸಭಾಂಗಣಗಳು, ಮನೋರಂಜನಾ ಪಾಕ್‌ಗಳು ಅಕ್ಟೋಬರ್ 15ರಿಂದ ತೆರೆಯಲಿವೆ. ಆದರೆ ಇದಕ್ಕೆ ಕೆಲವು ಷರತ್ತು ವಿಧಿಸಲಾಗಿದೆ. ಸಿನೆಮ ಮಂದಿರ, ಮಲ್ಟಿಪ್ಲೆಕ್ಸ್‌ಗಳು 50% ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಮಕ್ಕಳಿಗೆ ಕೊರೋನ ಸೋಂಕು ತಗುಲುವ ಅಪಾಯ ಹೆಚ್ಚಿರುವುದರಿಂದ ಶಾಲೆ ಆರಂಭದ ಬಗ್ಗೆ ಆಯಾ ರಾಜ್ಯಗಳೇ ಅಂತಿಮ ನಿರ್ಧಾರಕ್ಕೆ ಬರಬೇಕು ಎಂದು ಕೇಂದ್ರ ತಿಳಿಸಿದೆ.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News