ಐಪಿಎಲ್ ಹಣಾಹಣಿ: ರಾಜಸ್ಥಾನ್ ಗೆಲುವಿಗೆ 175 ರನ್ ಗುರಿ ನೀಡಿದ ಕೊಲ್ಕತ್ತಾ ನೈಟ್ ರೈಡರ್ಸ್

Update: 2020-09-30 15:56 GMT

ದುಬೈ, ಸೆ.30: ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಉತ್ತಮ ರನ್ ಪೇರಿಸಿದ್ದು, ರಾಜಸ್ಥಾನ್ ಗೆಲುವಿಗೆ 175 ರನ್ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಆರಂಭಿಕ ಆಟಗಾರ ಶುಭಮನ್ ಗಿಲ್ 47 ರನ್ ಬಾರಿಸಿದರು. ಇಯಾನ್ ಮಾರ್ಗನ್ 34, ಆಂಡ್ರೆ ರಸ್ಸೆಲ್ 24, ನಿತೀಶ್ ರಾಣಾ 22 ರನ್ ಗಳಿಸಿದರು.

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಅರ್ಚರ್ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News