ಪೂರ್ವಯೋಜನೆಯಿಲ್ಲದೆ 5 ತಾಸುಗಳಲ್ಲಿ ಬೃಹತ್ ಮಸೀದಿ ಕೆಡವಲು ಸಾಧ್ಯವಿರಲಿಲ್ಲ

Update: 2020-09-30 18:07 GMT

ಹೊಸದಿಲ್ಲಿ, ಸೆ.30: 1992ರ ಡಿಸೆಂಬರ್ 6ರಂದು ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಸೇರಿ ದಂತೆ ಸಂಘಪರಿವಾರದ ನಾಯಕರನ್ನು ದೋಷಮುಕ್ತಗೊಳಿಸಿರುವ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ತನಗೆ ಆಘಾತವುಂಟು ಮಾಡಿದೆ ಎಂದು ನರಸಿಂಹರಾವ್ ಸರಕಾರದಲ್ಲಿ ಗೃಹ ಕಾರ್ಯದರ್ಶಿಯಾಗಿದ್ದ ಮಾಧವ್ ಗೊಡ್ಬೋಲೆ ಹೇಳಿದ್ದಾರೆ.

 ಬಾಬರಿ ಮಸೀದಿ ಧ್ವಂಸ ಘಟನೆಯು ಪೂರ್ವಯೋಜಿತವಲ್ಲವೆಂಬ ಸಿಬಿಐ ನ್ಯಾಯಾಲಯದ ಅಭಿಪ್ರಾಯಕ್ಕೂ ಅವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಪೂರ್ವಯೋಜನೆಯಿಲ್ಲದೆ ಬಾಬರಿ ಮಸೀದಿಯನ್ನು ಕೇವಲ ಐದು ತಾಸುಗಳಲ್ಲಿ ಕರಸೇವಕರು ಧ್ವಂಸಗೊಳಿಸಲು ಸಾಧ್ಯವೇ ಇರುತ್ತಿರಲಿಲ್ಲವೆಂದು ಅವರು ಹೇಳಿರುವುದಾಗಿ ‘ಹಫಿಂಗ್ಟನ್‌ಪೋಸ್ಟ್’ ಸುದ್ದಿಜಾಲ ತಾಣದಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿದೆ.

 ‘‘ಪ್ರಾಮಾಣಿಕವಾಗಿ ಹೇಳುವುದಾದರೆ ಈ ತೀರ್ಪು ನನಗೆ ಗಾಬರಿಯುಂಟು ಮಾಡಿದೆ. ಮೊದಲನೆಯದಾಗಿ ಇಷ್ಟೊಂದು ಬೃಹತ್ ಗಾತ್ರದ ಮಸೀದಿಯನ್ನು ಯಾವುದೇ ಪೂರ್ವ ಯೋಜನೆಯಿಲ್ಲದೆ ಅಥವಾ ಪೂರ್ವಸಿದ್ಧತೆಯಿಲ್ಲದೆ ಐದು ತಾಸುಗಳ ಅವಧಿಯಲ್ಲಿ ಕೆಡವಿ ಹಾಕಲಾಯಿತೆಂಬುದನ್ನು ನಂಬಲು ಅಸಾಧ್ಯವಾದುದು’’ ಎಂದವರು ಹೇಳಿದ್ದಾರೆ. ನ್ಯಾಯಾಲಯದ ಈ ತೀರ್ಪು ನಮ್ಮ ನ್ಯಾಯಾಂಗ ವ್ಯವಸ್ಥೆಯ ಹಾಗೂ ಕ್ರಿಮಿನಲ್ ಕಾನೂನು ವ್ಯವಸ್ಥೆಯ ಮೇಲಿನ ವ್ಯಾಖ್ಯಾನವಾಗಿದೆ’’ ಎಂದವರು ಅಭಿಪ್ರಾಯಿಸಿರುವುದಾಗಿ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News