ಗಾಯದಿಂದಾಗಿ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್‌ನಿಂದ ಹೊರಕ್ಕೆ

Update: 2020-09-30 18:28 GMT

ಪ್ಯಾರಿಸ್: 24ನೇ ಗ್ರಾನ್ ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ಮಹಿಳಾ ಟೆನಿಸ್ ತಾರೆ ಆಘಾತ ಅನುಭವಿಸಿದ್ದರಿಂದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಬುಧವಾರ ಹಿಂದಕ್ಕೆ ಸರಿದಿದ್ದಾರೆ.

  ಮೂರು ಬಾರಿ ಫ್ರೆಂಚ್ ಓಪನ್ ಚಾಂಪಿಯನ್ 39ರ ಹರೆಯದ ಸೆರೆನಾ ಅಕಿಲ್ಸ್ ಸ್ನಾಯುರಜ್ಜು ಗಾಯದಿಂದ ಚೇತರಿಸಿಕೊಳ್ಳದಿದ್ದರೂ, ಫ್ರೆಂಚ್ ಓಪನ್ ಟೂರ್ನಮೆಂಟ್‌ಗೆ ಆಗಮಿಸಿದ್ದರು.

ಸೆರೆನಾ ಬುಧವಾರ ಎರಡನೇ ಸುತ್ತಿನಲ್ಲಿ ಬಲ್ಗೇರಿಯಾದ ಟ್ವೆಟಾನಾ ಪಿರೊಂಕೋವಾ ಅವರನ್ನು ಎದುರಿಸಬೇಕಾಗಿತ್ತು. ಆದರೆ ಸೆರೆನಾ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಪಿರೊಂಕೋವಾ ವಾಕ್‌ಓವರ್ ಪಡೆದರು. ಯುಎಸ್ ಓಪನ್ ನಂತರ ಗಾಯದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಇರಲಿಲ್ಲ ಎಂದು ವಿಲಿಯಮ್ಸ್ ಹೇಳಿದ್ದಾರೆ.

 ‘‘ನನಗೆ ನಾಲ್ಕರಿಂದ 6ವಾರಗಳವರೆಗೆ ಆಡುವಂತಿಲ್ಲ. ನಾನು ಈ ವರ್ಷ ಇನ್ನೊಂದು ಪಂದ್ಯಾವಳಿಯನ್ನು ಆಡುವುದಿಲ್ಲ’’ ಎಂದು ಸೆರೆನಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News