ದೇರಳಕಟ್ಟೆ: ಅಕ್ರಮ ಸಾಗಾಟ; 9 ದನಗಳು ಹಾಗೂ ಪಿಕಪ್ ವಾಹನ ವಶಕ್ಕೆ

Update: 2020-10-01 04:37 GMT

ಕೊಣಾಜೆ, ಅ.1: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಬೊಲೆರೊ ಪಿಕ್ ಅಪ್ ವಾಹನವನ್ನು ಕೊಣಾಜೆ ಪೊಲೀಸರು ಬೆನ್ನಟ್ಟಿ ತಡೆದು 9 ದನಗಳನ್ನು ರಕ್ಷಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಬುಧವಾರ ರಾತ್ರಿ 11:30 ರ ವೇಳೆಗೆ ಕೊಣಾಜೆ ಪೊಲೀಸ್ ಠಾಣೆಯ ಮುಂಭಾಗದಿಂದ‌ ತೊಕ್ಕೊಟ್ಟಿನ‌ ಕಡೆಗೆ ಅತಿ ವೇಗ, ಅಜಾಗರೂಕತೆಯಿಂದ ಚಲಿಸುತ್ತಿದ್ದ ಪಿಕ್ ಅಪ್ ವಾಹನವನ್ನು ರಾತ್ರಿ ಗಸ್ತಿನಲ್ಲಿದ್ದ ಎಸ್.ಐ ಮಲ್ಲಿಕಾರ್ಜುನ್ ನೇತೃತ್ವದ  ತಂಡವು ಬೆನ್ನಟ್ಟಿ ದೇರಳಕಟ್ಟೆಯಲ್ಲಿ ತಡೆದಿದೆ ಎಂದು ತಿಳಿದುಬಂದಿದೆ.

ವಾಹನವನ್ನು ಅಲ್ಲೇ ನಿಲ್ಲಿಸಿ ಚಾಲಕ ಮತ್ತು ಮತ್ತೊರ್ವ ಆರೋಪಿ ಪರಾರಿಯಾಗಿದ್ದಾನೆ. ಪಿಕ್ ವಾಹನವನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಒಂಬತ್ತು ಗೋವುಗಳಿರುವುದು ಪತ್ತೆಯಾಗಿದೆ.

ವಾಹನ ಮತ್ತು ದನಗಳನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News