ನನ್ನ ವಿಷಪ್ರಾಶನದ ಹಿಂದೆ ಪುಟಿನ್: ರಶ್ಯ ಪ್ರತಿಪಕ್ಷ ನಾಯಕ ನವಾಲ್ನಿ ಆರೋಪ

Update: 2020-10-01 15:03 GMT
ಪುಟಿನ್

ಬರ್ಲಿನ್ (ಜರ್ಮನಿ), ಅ. 1: ನನ್ನ ವಿಷಪ್ರಾಶನದ ಹಿಂದೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದ್ದಾರೆ ಎಂದು ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ನೇರ ಆರೋಪ ಮಾಡಿದ್ದಾರೆ.

ತಾನು ಚಿಕಿತ್ಸೆ ಪಡೆಯುತ್ತಿದ್ದ ಬರ್ಲಿನ್‌ನ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ನೀಡಿದ ಮೊದಲ ಸಂದರ್ಶನದಲ್ಲಿ ಅವರು ಈ ಆರೋಪ ಮಾಡಿದ್ದಾರೆ.

‘‘ಈ ಕೃತ್ಯದ ಹಿಂದೆ ಪುಟಿನ್ ಇದ್ದಾರೆ ಎಂದು ನಾನು ದೃಢವಾಗಿ ಹೇಳುತ್ತೇನೆ. ಇತರ ಯಾವುದೇ ಸನ್ನಿವೇಶಗಳು ನನಗೆ ಕಾಣುತ್ತಿಲ್ಲ’’ ಎಂದು ಜರ್ಮನಿಯ ವಾರ ಪತ್ರಿಕೆ ‘ಡೆರ್ ಸ್ಪೈಗಲ್’ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ನವಾಲ್ನಿ ಜೊತೆಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳನ್ನು ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಗುರುವಾರ ಪ್ರಕಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News